ದಾವಣಗೆರೆ : ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 26 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಕಾರ ಹುಣ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.
ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಮಾತನಾಡಿ, ಚನ್ನಗಿರಿ ವಿರೂಪಾಕ್ಷಪ್ಪನವರ ಕುಟುಂಬದ ಶ್ರೀ ಗಾಯತ್ರಿ ಪೂಜೆಯಾಗಿ ಅವರ ಶತಮಾನೋತ್ಸವ ಸಂಭ್ರಮದಿAದ ದಾವಣಗೆರೆಯ ದಾನಿಗಳ ಊರಿನಲ್ಲಿ ದಾನ, ಧರ್ಮ, ಸಾಮಾಜಿಕ ಸೇವೆ ಶ್ಲಾಘನೀಯ. ಯಾವುದೇ ವಂಶದವರು ಒಂದು ನೂರು ವರ್ಷ ಬದುಕಿಲ್ಲ ಇವರು ಒಂದು ನೂರು ಒಂದು ವರ್ಷಕ್ಕೆ ಕಾಲಿಟ್ಟಿದ್ದು ಅದ್ಭುತ.
ಆಧ್ಯಾತ್ಮಿಕ ಗಾಯತ್ರಿ ಶ್ರೀ ಗಾಯತ್ರಿ ಪೂಜೆಯಲ್ಲಿ ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್, ಕೆ.ಹೆಚ್.ಮಂಜುನಾಥ್, ಗಾಯಿತ್ರಿ ಪರಿವಾರದ ಸಂಚಾಲಕರಾದ ಭಾವನ್ನಾರಾಯಣ, ಸತೀಶ್ ಆರ್.ಎಂ., , ಸತ್ಯನಾರಾಯಣಮೂರ್ತಿ, ಗುರುಮೂರ್ತಿ, ಡಿ.ಎಸ್.ಬಸವರಾಜ್, ಶೋಭಾ, ಪ್ರವೀಣ್ ಪೈ, ಕಿರುವಾಡಿ ಸೋಮಶೇಖರ್, ಮಧುರ ಹೆಚ್., ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

