ಹವಾಮಾನ ಎಚ್ಚರಿಕೆ: ಉಡುಪಿ ಸೇರಿ ಕರಾವಳಿಗೆ 2 ದಿನ ರೆಡ್ ಅಲರ್ಟ್ – ಜುಲೈ 2, 3ರಂದು ಧಾರಾಕಾರ ಮಳೆ

0
4

ಉಡುಪಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಸೇರಿದಂತೆ ಸಂಪೂರ್ಣ ಕರಾವಳಿ ಭಾಗಕ್ಕೆ ಜುಲೈ 2 ಮತ್ತು 3ರಂದು (ಬುಧವಾರ, ಗುರುವಾರ) ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.

ಮುನ್ಸೂಚನೆ ಏನು?
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸಹಿತ ಅತಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಒಂದೆರಡು ಕಡೆಗಳಲ್ಲಿ 24 ಗಂಟೆಯಲ್ಲಿ 204.5 ಮಿ.ಮೀ ಗೂ ಅಧಿಕ ಮಳೆ ಆಗುವ ಮುನ್ಸೂಚನೆ ಇದೆ.

ಮೀನುಗಾರರಿಗೆ ಕಟ್ಟೆಚ್ಚರ:
ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಮುದ್ರ ಪ್ರಕ್ಷುಬ್ಧಗೊಳ್ಳಲಿದೆ. ಅಲೆಗಳ ಅಬ್ಬರ ತೀವ್ರವಾಗಿರುವ ಕಾರಣ ಮೀನುಗಾರರು ಮುಂದಿನ 48 ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ಸಾರ್ವಜನಿಕರಿಗೆ ಸೂಚನೆ:

  1. ತಗ್ಗು ಪ್ರದೇಶ, ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಿ.
  2. ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಾಧ್ಯತೆ ಇರುವುದರಿಂದ ಸಂಚಾರಕ್ಕೆ ಎಚ್ಚರ.
  3. ಮರದ ಕೆಳಗೆ, ವಿದ್ಯುತ್ ಕಂಬಗಳ ಬಳಿ ನಿಲ್ಲಬೇಡಿ. ಗುಡುಗು-ಮಿಂಚಿನ ವೇಳೆ ಮನೆಯೊಳಗೇ ಇರಿ.
  4. ಅನಗತ್ಯ ಪ್ರಯಾಣ ಬೇಡ. ತುರ್ತು ಸೇವೆಗಳಿಗೆ ಮಾತ್ರ ಹೊರಬನ್ನಿ.

  5. ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here