ಸಿನಿಮಾಸಿರಿಯಿಂದ ಚನ್ನಗಿರಿ ವಿರೂಪಾಕ್ಷಪ್ಪನವರಿಗೆ ಶತಮಾನೋತ್ಸವದ ಪ್ರಯುಕ್ತ ಸನ್ಮಾನ

0
14

ದಾವಣಗೆರೆ : ದಾವಣಗೆರೆಯ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾಸಿರಿಯಿಂದ ಚನ್ನಗಿರಿ ವಿರೂಪಾಕ್ಷಪ್ಪನವರ ಜನುಮದಿನದ ಶತಮಾನೋತ್ಸವದ ಪ್ರಯುಕ್ತ ಅವರ ಮನೆಗೆ ಹೋಗಿ ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿ ಗೌರವದಿಂದ ಸನ್ಮಾನಿಸಲಾಯಿತು ಎಂದು ಸಿನಿಮಾಸಿರಿ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ದಾವಣಗೆರೆ ದಾನಿಗಳ ಮನೆತನದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ನಿಂದ ನಿರಂತರವಾಗಿ ಧಾನ, ಧರ್ಮ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಜಾತಿ,ಮತ ಭೇದವಿಲ್ಲದೇ ಆರ್ಥಿವಾಗಿ ಸಾರ್ವಜನಿಕರಿಗೆ ಜನಸೇವೆ ಮಾಡುತ್ತಾ ಬಂದಿರುವ ಚನ್ನಗಿರಿ ವಿರೂಪಾಕ್ಷಪ್ಪನವರು 101 ವರ್ಷಕ್ಕೆ ಕಾಲಿಟ್ಟಿದ್ದರೂ ಇಂದಿನವರೆಗೂ ಸಾರ್ಥಕ ಜೀವನಕ್ಕೆ ಸಾರ್ಥಕತೆ ಎಂದು ಸಿನಿಮಾಸಿರಿ ಅಧ್ಯಕ್ಷರಾದ ಅಂದನೂರು ಮುಪ್ಪಣ್ಣನವರು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು. ಸಿನಿಮಾಸಿರಿ ಮಾಜಿ ಅಧ್ಯಕ್ಷರಾದ ಹೆಚ್.ವಿ.ಮಂಜುನಾಥಸ್ವಾಮಿ, ಟಿ.ಎಂ. ಪಂಚಾಕ್ಷರಯ್ಯ, ಕಣಕುಪ್ಪಿ ಮುರುಗೇಶಪ್ಪ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here