ಬೆಂಗಳೂರು : ತುಳುವರ್ಲ್ಡ್ ಫೌಂಡೇಶನ್ ಮತ್ತು ಬೆಂಗಳೂರಿನ ಬೊಮ್ಮಸಂದ್ರದ ‘ತುಳುವೆರೆ ಚಾವಡಿ ತೆಂಕಾಯಿ’ ಸಂಘಟನೆಗಳು ಜಂಟಿಯಾಗಿ ಜುಲೈ 11, 2026 ರ ಶನಿವಾರದಂದು ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವಿಶೇಷ ತುಳು ಯಕ್ಷಗಾನ ಕಾರ್ಯಾಗಾರ ಮತ್ತು ಸಂಶೋಧನೆ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿವೆ.
ಅಲಯನ್ಸ್ ವಿಶ್ವವಿದ್ಯಾಲಯದ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್’ ಹಾಗೂ ‘ಸ್ಕೂಲ್ ಆಫ್ ಪರ್ಫಾರ್ಮಿಂಗ್ ವಿಶುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್’ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
”ತುಳುವೆರೆ ಜಾಲಾ ಟೊರ್ದ್ – ಯಕ್ಷಗಾನ ಮುಟ್ಟ” ಎಂಬ ಹೆಸರಿನ ಈ ದಿನಪೂರ್ತಿ ಕಾರ್ಯಕ್ರಮದಲ್ಲಿ ತುಳು ಯಕ್ಷಗಾನದ ಕಾರ್ಯಾಗಾರ, ಪ್ರದರ್ಶನ ಹಾಗೂ ಸಂಶೋಧನಾ ಪ್ರಬಂಧಗಳ ಪ್ರಸ್ತುತಿ ನಡೆಯಲಿದೆ.
ಉದ್ಘಾಟನಾ ಸಮಾರಂಭ
ಬೆಳಗ್ಗೆ 11:00 ಗಂಟೆಗೆ ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೆರವೇರಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶಾನ್ ಪ್ರೀಸ್ಲಿ ಬೋಸ್ ವಹಿಸಲಿದ್ದಾರೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಚಿನ್ನಪ್ಪ ಗೌಡ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಲಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಮತ್ತು ಬೆಂಗಳೂರು ತುಳುವೆರೆ ಚಾವಡಿ ತೆಂಕಾಯಿ ಅಧ್ಯಕ್ಷರಾದ ಉಮೇಶ್ ಬಂಗೇರ ಉಪಸ್ಥಿತರಿರಲಿದ್ದಾರೆ.
ಪ್ರಾತ್ಯಕ್ಷಿಕೆ ಕಾರ್ಯಾಗಾರ ಮತ್ತು ಉಪನ್ಯಾಸ ಮಧ್ಯಾಹ್ನ 2:30 ಗಂಟೆಗೆ ಯಕ್ಷಗಾನ ವಿದ್ವಾಂಸರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಡಾ. ತಾರಾನಾಥ ಬಲ್ಯಾಯ ವರ್ಕಾಡಿ ಹಾಗೂ ಜಾನಪದ ವಿದ್ವಾಂಸರಾದ ದಾ. ನಾ. ಉಮ್ಮಣ್ಣ ಅವರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಯಕ್ಷಗಾನ ಪ್ರದರ್ಶನ
ಸಂಜೆ 5 ಗಂಟೆಯಿಂದ ಕಲಾವಿದರಿಂದ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಪ್ರಶಾಂತ್ ರೈ ಪಂಜ (ಭಾಗವತರು), ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ (ಮದ್ದಳೆ), ವರುಣ್ ಹೆಬ್ಬಾರ್ (ಚೆಂಡೆ) ಹಾಗೂ ರಂಜಿತ್ ಬಲಿಪ (ಚಕ್ರತಾಳ) ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಸುಂದರ ಬಂಗಾಡಿ, ಪ್ರಶಾಂತ್ ಸಿ. ಕೆ., ಅಕ್ಷಯ್ ಮಾರ್ನಾಡ್, ಭುವನ್ ಶೆಟ್ಟಿ ಮತ್ತು ಶಶಿಧರ್ ಬಚ್ಚಕೆರೆ ಪಾತ್ರ ನಿರ್ವಹಿಸಲಿದ್ದಾರೆ. ಜಿತೇಶ್ ಕುಡ್ಲ ಅವರು ವೇಷಭೂಷಣದ ಜವಾಬ್ದಾರಿ ಹೊತ್ತಿದ್ದಾರೆ.
ಡಾ. ರಾಜೇಶ್ ಕೃಷ್ಣ ಆಳ್ವ -ನಿರ್ದೇಶಕರು, ತುಳುವರ್ಲ್ಡ್ ಫೌಂಡೇಶನ್, ಉಮೇಶ್ ಶೆಟ್ಟಿ -ಕಾರ್ಯದರ್ಶಿ, ತುಳುವೆರೆ ಚಾವಡಿ ತೆಂಕಾಯಿ, ಡಾ. ಎ. ಎಮ್. ಶ್ರೀಧರನ್ – ನಿರ್ದೇಶಕರು, CoE IKS, ಅಲಯನ್ಸ್ ವಿಶ್ವವಿದ್ಯಾಲಯ, ವಸಂತ ರೈ – ಪ್ರಧಾನ ಕಾರ್ಯದರ್ಶಿ, ತುಳುವರ್ಲ್ಡ್ ಫೌಂಡೇಶನ್, ವಿನೋದ್ ಕುಮಾರ್ -ಖಜಾಂಚಿ, ತುಳುವೆರೆ ಚಾವಡಿ ತೆಂಕಾಯಿ, ಡಾ. ಶ್ರುತಿ ಚಂದ್ರಶೇಖರ್ – ವಿಭಾಗ ಮುಖ್ಯಸ್ಥರು (HoD), ಸ್ಕೂಲ್ ಆಫ್ ಪರ್ಫಾರ್ಮಿಂಗ್ ವಿಶುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್ ಇವರ ಸಂಯೋಜನೆಯಲ್ಲಿ ಚಂದಾಪುರ – ಆನೇಕಲ್ ಮುಖ್ಯ ರಸ್ತೆಯಲ್ಲಿರುವ ಅಲಯನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗಾನ ಮತ್ತು ಕಲೆಗೆ ಆಸಕ್ತಿ ಇರುವ ಎಲ್ಲರಿಗೂ ಆಹ್ವಾನ ನೀಡಲಾಗಿದೆ.

