ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿಯಲ್ಲಿ ಜುಲೈ 1ರಿಂದ 4ರವರೆಗೆ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ-2026ಯ ಎರಡನೇ ದಿನದ ಪಂದ್ಯಾವಳಿಯಲ್ಲಿ ಅಂಡರ್-19 ಬಾಲಕ ಮತ್ತು ಬಾಲಕಿಯರ ವಿಭಾಗದ ಫೈನಲ್ ಪಂದ್ಯಗಳು ರೋಚಕವಾಗಿ ನಡೆದವು.

ಅಂಡರ್-19 ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಹಿಮಾನ್ಷಿ ಚೌಧರಿ ಅವರು ರಾಶಿ ವಿ. ರಾವ್ ಅವರನ್ನು 9-11, 11-6, 11-13, 12-10, 11-6, 4-11, 11-6 ಅಂತರದಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಸೆಮಿಫೈನಲ್‌ನಲ್ಲಿ ಹಿಮಾನ್ಷಿ ಚೌಧರಿ ಅವರು ಐರಿನ್ ಅನ್ನಾ ಸುಭಾಷ್ ವಿರುದ್ಧ 11-9, 7-11, 11-1, 11-9 ಅಂತರದಿಂದ ಜಯ ಸಾಧಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ರಾಶಿ ವಿ. ರಾವ್ ಅವರು ಹಿಯಾ ಸಿಂಗ್ ವಿರುದ್ಧ 11-4, 11-5, 9-11, 12-10 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದ್ದರು.
ಅಂಡರ್-19 ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಬಿ.ಆರ್. ಗೌರವ್ ಅವರು ಗೌರವ್ ಗೌಡ ಅವರನ್ನು 11-6, 12-14, 11-9, 11-8, 9-11, 11-1 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಸೆಮಿಫೈನಲ್‌ನಲ್ಲಿ ಗೌರವ್ ಗೌಡ ಅವರು ಆರ್ನವ್ ನವೀನ್ ವಿರುದ್ಧ 5-11, 11-4, 5-11, 11-7, 11-5 ಅಂತರದಿಂದ ಜಯಗಳಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಬಿ.ಆರ್. ಗೌರವ್ ಅವರು ತಮೋಘ್ನ ಮುಂಡರ್ಗಿ ಅವರನ್ನು 11-5, 11-5, 11-8 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿಭಾವಂತ ಆಟಗಾರರು ಭಾಗವಹಿಸಿದ್ದು, ಮುಂದಿನ ಸುತ್ತಿನ ಪಂದ್ಯಗಳು ಜುಲೈ 4ರವರೆಗೆ ನಡೆಯಲಿವೆ.

