ಶಿವಾಲಯ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ ಶಾಸಕರು ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಡಾ. ದೇವಿಪ್ರಸಾದ್ ಶೆಟ್ಟಿ

0
25

ಕಾಪು : ಬೆಳಪು ಗ್ರಾಮಕ್ಕೆ ಸಂಬಂಧಪಟ್ಟ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಅಜೀರ್ಣ ಸ್ಥಿತಿಯಲ್ಲಿರುವ ಶಿವಾಲಯದ ಕುರಿತು, ಕಾಪು ಕ್ಷೇತ್ರದ ಶಾಸಕರಾದ ಸುರೇಶ ಶೆಟ್ಟಿ ಗುರ್ಮೆ ಹಾಗೂ ರಾಜರ್ಷಿ ವಾಸುದೇವ ಶೆಟ್ಟಿ ಕಾಪು ಅವರು ಬೆಳಪು ಗ್ರಾಮ ಅಭಿವೃದ್ಧಿಯ ರೂವಾರಿ ಡಾ. ದೇವಿಪ್ರಸಾದ್ ಶೆಟ್ಟಿ ಅವರೊಂದಿಗೆ ಭೇಟಿ ನೀಡಿ, ಕ್ಷೇತ್ರದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಿತಿನ್ ತಂತ್ರಿ ಬೆಟ್ಟಿಗೆ, ಪಟೇಲ್ ಪ್ರಕಾಶ್ ರಾವ್, ನಾರಾಯಣ್ ರಾವ್ ಗೂಡ್ಲಚ್ಚಿಲ್, ಪಣಿಯೂರು ಗುತ್ತು ಚಂದ್ರ ಪ್ರಸಾದ್ ಶೆಟ್ಟಿ, ಬುಳಿಬೆಟ್ಟು ಗುತ್ತು ವಸುಂಧರ ಶೆಟ್ಟಿ, ಪಣಿಯೂರು ಹೊಸಮನೆ ಮಹೇಶ್ ಶೆಟ್ಟಿ, ಸುರೇಂದ್ರ ಪಣಿಯೂರು, ರಾಕೇಶ್ ಕುಂಜೂರು, ಶಂಕರ್ ಬೆಳಪು, ಜನಾರ್ದನ ಕುಲಾಲ್ ಮಲಂಗೊಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ವಿಷಯದ ಕುರಿತು ವಿಸ್ತೃತವಾಗಿ ಚರ್ಚಿಸಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ತಾ. 09/07/2026 ಗುರುವಾರ ಮಧ್ಯಾಹ್ನ 3.00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಸಭೆಯನ್ನು ಕರೆಯಲು ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here