ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿಗೆ ಮನವಿ ಸಲ್ಲಿಕೆ

0
7

ಕಾಪು : ಶಿರ್ವ ಸಹಕಾರಿ ವ್ಯವಸಾಯಿಕ ಸಂಘ. ನಿ. ಶಿರ್ವ ವತಿಯಿಯಂದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದಲ್ಲಿ ಮಾನ್ಯ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳ ಅನ್ವಯ ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ಹಿಂದಿನಂತೆಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆ ವಿನಂತಿಸಲಾಯಿತು.

ನಿಯೋಗದಲ್ಲಿ ಸಂಘದ ಉಪಾಧ್ಯಕ್ಷರಾದ ವೀರೇಂದ್ರ ಪಾಟ್ಕರ್, ನಿರ್ದೇಶಕರಾದ ಉಮೇಶ್ ಆಚಾರ್ಯ ಮತ್ತು ಹರಿಣಾಕ್ಷ ಶೆಟ್ಟಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here