ಕುಲಾಲ ಸಮಾಜ (ರಿ ) ಕಳತ್ತೂರು, ಒಕ್ಕೂಟ ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

0
26

ಕಾಪು :ಕುಲಾಲ ಸಮಾಜ (ರಿ.) ಕಳತ್ತೂರು ಒಕ್ಕೂಟ ಇದರ ಎಂಟನೇ ವರ್ಷದ ಮಹಾಸಭೆ ಕಾರ್ಯಕ್ರಮವು ದಿನಾಂಕ 05-06-2026ನೇ ರವಿವಾರ ಬೆಳಿಗ್ಗೆ 10 ಗಂಟೆಗೆ ಕಳತ್ತೂರು ಪುಂಚಲಕಾಡು ಸುದೀಪ್ ಕುಲಾಲ್ ಮನೆಯಲ್ಲಿ ಜರುಗಿತು.
ಸಭಾ ಕಾರ್ಯಕ್ರಮವು ಶಾನ್ವಿತ್ ಕುಲಾಲ್ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಾಂಡು ಕುಲಾಲ್ ಪಯ್ಯಾರು ವಹಿಸಿದರು ನಂತರ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಸಿದರು.


ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,
ಪಿಯುಸಿ ಪರೀಕ್ಷೆ ಯಲ್ಲಿ ರಾಜ್ಯಕ್ಕೆ 4 ನೇ ಅಂಕ ಗಳಿಸಿದ ಕಾವ್ಯ ಕುಲಾಲ್ ಹಾಗೂ SSlC ಯಲ್ಲಿ ಸಾಧನೆಗೈದ ಭವಿಷ್ ಮೂಲ್ಯ, ಪಿಯುಸಿಯಲ್ಲಿ ಸಾಧನೆಗೈದ ನಿಹಾರ್ ಕುಲಾಲ್, ಸಾಕ್ಷಾತ್ ಕುಲಾಲ್ ರವರಿಗೆ ಸನ್ಮಾನ ಜೊತೆಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜೇಶ್ ಕುಲಾಲ್ ಪಯ್ಯಾರು ಶಂಕರ್ ಮೂಲ್ಯ ಇರಂದಾಡಿ, ಸಾಧುಮೂಲ್ಯ, ಕೃಷ್ಣ. ಕೆ. ಮೂಲ್ಯ,ಹರೀಶ್ ಕೆ ಮೂಲ್ಯ, ಉದಯ ಕುಲಾಲ್,ಮಹೇಶ್ ಕುಲಾಲ್, ಯಾಧವ ಕುಲಾಲ್, ತೋತು ಮೂಲ್ಯ, ಉಪಸ್ಥಿತರಿದ್ದರು , ಸಂತೋಷ್ ಎಸ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ನೀಡಿದರು,ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಉಪಹಾರ ನಡೆಯಿತು….

ಮಾಹಿತಿ, ಚಿತ್ರ : ಉದಯ ಕುಲಾಲ್,ಕಳತ್ತೂರು,

LEAVE A REPLY

Please enter your comment!
Please enter your name here