ರಾಮದುರ್ಗದಲ್ಲಿ ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್ : ಹಿರಿಯ ದಿವಾಣಿ ನ್ಯಾಯಾಧೀಶರು ಪುಷ್ಪಲತಾ. ಕೆ

0
13

ರಾಮದುರ್ಗ : ರಾಜಿ ಆಗಬಹುದಾಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಜುಲೈ 11ರಂದು ರಾಮದುರ್ಗ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ರಾಮದುರ್ಗ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ ಅಧ್ಯಕ್ಷರು ಶ್ರೀಮತಿ. ಪುಷ್ಪಲತಾ. ಕೆ ಹೇಳಿದರು.

ರಾಮದುರ್ಗ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜುಲೈ 11ರಂದು ಜರುಗಲಿರುವ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು . ಬಾಕಿ ಇರುವ ಪ್ರಕರಣಗಳು ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಆಸ್ತಿ ವಿವಾದ, ಸಿವಿಲ್ ವ್ಯಾಜ್ಯ, ವಿಭಾಗದ ದಾವೆ, ಹಣ ವಸೂಲಾತಿ ದಾವೆ, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳನ್ನು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ನ್ಯಾಯಾಲಯದ ಸಂಕೀರ್ಣದ ಸುತ್ತಮುತ್ತ ಕಂಪೌಂಡ್ , ಸಿಸಿಟಿವಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನ್ಯಾಯಾಲಯಕ್ಕೆ ಬರುವ ಜನರಿಗೆ ಬಸ್ಸುಗಳನ್ನು ನಿಲ್ಲಿಸುವ ಸೂಚನೆಯ ನಾಮಫಲಕವನ್ನು ಅಳವಡಿಸಬೇಕೆಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಶ್ರೀಮತಿ. ಭಾಗ್ಯಶ್ರೀ. ಮಾದರ ದಿವಾಣಿ ನ್ಯಾಯಾಧೀಶರು ರಾಮದುರ್ಗ ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ, ಎ ಡಿ ಲಕ್ಕನ್ನವರ ಕಾರ್ಯದರ್ಶಿಗಳು ವಕೀಲರ ಸಂಘ ರಾಮದುರ್ಗ,ರಾಮದುರ್ಗ ಸಿಪಿಐ (CPI) ವಿನಾಯಕ ಬಡಿಗೇರ, ರಾಮದುರ್ಗ ಪೊಲೀಸ್ ಠಾಣೆಯ ಪಿಎಸ್ಐ (PSI) ಸವಿತಾ ಮುನ್ಯಾಳ, ಕಟಕೋಳ ಪೊಲೀಸ್ ಠಾಣೆಯ ಪಿಎಸ್ಐ (PSI) ಬಸವರಾಜ .ಡಿ. ಕೊಣ್ಣೂರ, ಸುರೇಬಾನ ಪೊಲೀಸ್ ಠಾಣೆಯ ಪಿಎಸ್ಐ (PSI) ಗುರುರಾಜ್ ಕಲಬುರ್ಗಿ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಾನೂನು ಸೇವಾ ಸಿಬ್ಬಂದಿ ಲೋಹಿತ ಪಾಟೀಲ ಸಂಪರ್ಕಿಸಿ. 8050644574

LEAVE A REPLY

Please enter your comment!
Please enter your name here