ಬ್ರಹ್ಮಾವರ : ಶ್ರೀವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠ ಅರೆಮಾದನಹಳ್ಳಿ ಶಾಖಾ ಮಠ ಕಜ್ಕೆ ಇದರ ಶ್ರೀ ಶಿವಸುಜ್ಞಾನ ತೀರ್ಥಮಹಾಸ್ವಾಮೀಜಿ ಮತ್ತು ಈವರ್ಷಶಿಷ್ಯ ಸ್ವೀಕಾರ ಮತ್ತು ಪೀಠದ ಉತ್ತರಾಧಿಕಾರಿಯಾದ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ಪ್ರಥಮ ಚಾತುರ್ಮಾಸ್ಯ ವೃತ ಆಚರಣೆಯ ಪೂರ್ವಬಾವಿಯಾಗಿ ಕರಾವಳಿ ಜಿಲ್ಲೆಯಮಂಗಳೂರಿನಿAದ ಅಂಕೋಲ ತನಕದ 13 ವಿಶ್ವಕರ್ಮ ಸಮಾಜದ ದೇವಸ್ಥಾನಗಳ ಬೇಟಿ ನೀಡಿ ಶುಕ್ರವಾರ ಶ್ರೀಗಳು ವಾಸ್ಥವ್ಯದಲ್ಲಿರುವ ಶಾಖಾಮಠ ಕಜ್ಕೆಯ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದಲ್ಲಿ ಕರಾವಳಿ ಭಾಗದ ಶಿಷ್ಯರಿಗೆ ಅವ್ಹಾನನೀಡಿದರು.

ಈ ಸಂದರ್ಭ ಶ್ರೀಗಳು ಮಾತನಾಡಿ ಕಜ್ಕೆ ಸೇರಿದಂತೆ ಅನೇಕ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವೃತವಾಗುತ್ತಿದ್ದರೂ ಈವರ್ಷಶಿಷ್ಯ ಸ್ವೀಕಾರ ಮತ್ತು ಪೀಠದ ಉತ್ತರಾಧಿಕಾರಿಯಾದ ಕಾರಣ ಪ್ರಥಮಬಾರೀಗೆ ಮೂಲಮಠದಲ್ಲಿ ಜುಲೈ 29ರಿಂದ 2 ತಿಂಗಳು ನಡೆಯುವ ಚಾತುರ್ಮಾಸ್ಯ ವೃತ ನಡೆಯಬೇಕಾದ ಕಾರಣ ಇಲ್ಲಿನ ಶಿಷ್ಯರು ಆಗಮಿಸಿ ಗುರು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿಯ ಮಂಡಳಿಯ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಮಹಿಳಾ ಸಮಿತಿಯ ಸದಸ್ಯರು ಹಾಜರಿದ್ದರು.

