ಶಿವ ಸದನ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯದಲ್ಲಿ ಪಡುಮಲೆ ರಮಾದೇವಿ, ಲಕ್ಷ್ಮೀನಾರಾಯಣರಾವ್ ದಂಪತಿಗಳು ತಮ್ಮ ಜೀವನದ ಶುಭಘಳಿಗೆಯ ಪ್ರಯುಕ್ತ ಭಜನೆಯ ಮೂಲಕ ಮನಸ್ಸಿಗೆ ಶಾಂತಿ ಮತ್ತು ಆತ್ಮಕ್ಕೆ ಭಕ್ತಿಯ ಬೆಳಕು ನೀಡಿದಂತೆ, ಅನ್ನದಾನದ ಮೂಲಕ ದೇಹಕ್ಕೆ ತೃಪ್ತಿ ನೀಡುವ
ಖ್ಯಾತ ಸಂಕೀರ್ತನಾ ಕಾರರಾದ ರಾಮಕೃಷ್ಣ ಕಾಟು ಕುಕ್ಕೆ ಯವರ ಭಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮವು ಎಲ್ಲರ ಮನಸ್ಸನ್ನು ಭಕ್ತಿಯ ಸಾಗರದಲ್ಲಿ ತೇಲಿಸಿತು. ಅವರ ಸುಮಧುರ ಕಂಠ, ಭಾವಪೂರ್ಣ ಗಾಯನ ಹಾಗೂ ದೈವ ಭಕ್ತಿಯಿಂದ ಕೂಡಿದ ಸಂಕೀರ್ತನೆಗಳು ಶಿವ ಸದನದ ವಾತಾವರಣವನ್ನು ಆಧ್ಯಾತ್ಮಿಕವನ್ನಾಗಿ ಪರಿವರ್ತಿಸಿದವು.
ಪ್ರತಿಯೊಂದು ಭಜನೆಯು ಭಕ್ತರ ಹೃದಯದಲ್ಲಿ ಭಗವಂತನ ಸಾನಿಧ್ಯವನ್ನು ಅನುಭವಿಸುವಂತೆ ಮಾಡಿತು. ಈ ದಿವ್ಯ ಸಂಕೀರ್ತನೆಯ ಮೂಲಕ ಆನಂದ ,ನೆಮ್ಮದಿ ಹಾಗೂ ಭಕ್ತಿಯ ಸುವಾಸನೆ ನೀಡಿದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಸಂಕೀರ್ತನಾ ಸೇವೆಯನ್ನು ಇನ್ನಷ್ಟು ಭಕ್ತಿ ರಸಮಯವನ್ನಾಗಿಸಿದ ತಬಲಾದ ನಾದವು ಲಯದ ಸೊಬಗನ್ನು ತುಂಬಿದರೆ, ಹಾರ್ಮೋನಿಯಂನ ಮಧುರ ಸ್ವರಗಳು ಎಲ್ಲರ ಮನಸ್ಸನ್ನು ದೇವರ ಸನ್ನಿಧಿಯತ್ತ ಕೊಂಡೊಯ್ದವು. ಇವರ ಸಮರ್ಪಿತ ಸಂಗೀತ ಸೇವೆಯಿಂದ ಕಾರ್ಯಕ್ರಮವು ಭಕ್ತಿ ಭಾವದಿಂದ ಕಂಗೊಳಿಸಿತು.
ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಸುಮಂಗಲ ಪ್ರಭಾಕರ್ ಸ್ವಾಗತಿಸಿದರು.
ಟ್ರಸ್ಟಿನ ಗೌರವ ಅಧ್ಯಕ್ಷ ರಘುನಾಥ್ ರಾವ್ ದಂಪತಿಗಳು, ಕರುಣ್ ಬೆಳ್ಳೆ,ಟ್ರಸ್ಟ್ ಸದಸ್ಯರಾದ ಚೇತನ್ ಶರ್ಮಾ,ಸಾಯಿ ಪ್ರಸಾದ್, ಗಾಯತ್ರಿ ಫಿಲಿಂಜಾ, ಮೋಹನ್ ದಾಸ್ ಪಿಲಿಂಜಾ, ಶ್ರೀಪತಿ ರಾವ್ ದಂಪತಿಗಳು, ಸುಬ್ರಹ್ಮಣ್ಯ ಸಭಾದ ಸದಸ್ಯರು,ಪುತ್ತೂರಿನಿಂದ ಆಗಮಿಸಿದ ಅವರ ಬಂಧುಗಳು,ದಿನಕರ್ ರಾವ್ ಫ್ಯಾಮಿಲಿ,ಸತ್ಯನಾರಾಯಣ ರಾವ್, ಲಕ್ಷ್ಮೀನಾರಾಯಣರಾವ್ ದಂಪತಿ ಯವರ ಆಪ್ತರು, ಸಿಬ್ಬಂದಿ ವರ್ಗದವರು, ಮ್ಯಾನೇಜರ್, ಮೇಟ್ರನ್,ಸೂರ್ಯ ಭಟ್ ದಂಪತಿಗಳು, ರಾಧಾಕೃಷ್ಣ ಭಟ್ ದಂಪತಿ ಗಳು, ಸಹೋದರರು ಜಂಟಿಯಾಗಿ ವೇದಘೋಷ ಹೇಳಿದರು. ದಿನಕರ್ ರಾವ್ ಅವರು ಆಗಮಿಸಿದ, ಸಹಕರಿಸಿದ,ಪ್ರಾಯೋಜಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
.

