ಉಡುಪಿ ಜಿಲ್ಲಾ ವರ್ತಕರ ಸಂಘದಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಸೀಯಳಾಭಿಷೇಕ

0
8

ಉಡುಪಿ : ಜಿಲ್ಲಾ ವರ್ತಕರ ಸಂಘದ ವತಿಯಿಂದ ಉಡುಪಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸೀಯಳಾಭಿಷೇಕ ಜರಗಿತು.

ನಾಡಿನಲ್ಲಿ ಉತ್ತಮವಾದ ಮಳೆ,ಬೆಳೆ, ವ್ಯಾಪಾರ,ಮೀನುಗಾರಿಕೆಗಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಧುಕರ ಉಪಾಧ್ಯಾಯರವರು ದೇವರಿಗೆ ಅಭಿಷೇಕವನ್ನು ನೆರವೇರಿಸಿದರು. ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಪೈಯವರು ದೇವರಲ್ಲಿ ಪ್ರಾರ್ಥಿಸುತ್ತಾ ದೇವರ ಅನುಗ್ರಹ ಒಂದು ಇದ್ದರೆ ಯಾವ ಸಮಸ್ಯೆಗಳು ಕೂಡ ಬಂದರು ಪರಿಹಾರ ಆಗುತ್ತದೆ .

ಅದಕ್ಕೆ ಉದಾಹರಣೆ ಇತ್ತೀಚಿಗೆ ಸುರಿಯುತ್ತಿರುವ ನಿರಂತರ ಮಳೆ ಎಂದರು.ಅಭಿಷೇಕದ ಸಂಕಲ್ಪವನ್ನು ಸಂಘದ ಪ್ರಧಾನ ಕಾರ್ಯದರ್ಶಿಯವ ರಾದ ಪಾದೆಮಠ ನಾಗರಾಜ ಅಡಿಗರು ನೆರವೇರಿಸಿದರು, ಸಂಘದ ಸಂಪರ್ಕಾಧಿಕಾರಿಯವರಾದ ಮಡಿ ವಿಶ್ವನಾಥ ಖಾರ್ವಿಯವರು ಕಾರ್ಯಕ್ರಮ ನಿರ್ವಾಹಣೆ ಮಾಡಿದರು. ಸಂಘದ ಪದಾಧಿಕಾರಿಗಳಾದ ಸತೀಶ್ ಕಿಣಿ, ಸುರೇಶ್ ಪೈ,ಕರುಣ ಪೈ, ರಾಜ ಶೆಟ್ರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಖ್ಯಾತ ಸಂಗೀತಗಾರ್ತಿ ಮಾಯ ಕಾಮತ್ ಹಾಗೂ ರಮ್ಯ ಮಲ್ಯ ತಂಡದವರಿಂದ ಭಜನ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here