ಆತ್ಮಿಕಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ‌ . ಬ್ರಹ್ಮಾವರ ಇದರ ವಾರ್ಷಿಕ ಸಾಮಾನ್ಯ ಸಭೆ ಯಶಸ್ವಿ

0
7

ಆತ್ಮಿಕಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ‌ . ಬ್ರಹ್ಮಾವರ ಇದರ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 05 -07-2026 ರವಿವಾರದಂದು ಕೃಷ್ಣಗಿರಿ ಆರ್ಕೆಡ್ 3 ನೇ ಮಹಡಿ ಆಕಾಶವಾಣಿ ವ್ರತ್ತ ಬ್ರಹ್ಮವಾರದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಘುರಾಮ ಮರಕಾಲ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕರು ಹಾಗೂ ಸಂಘದ ಕಾಯ್ದೆ ಸಲಹೆಗಾರರಾದ ಮಂಜುನಾಥ್ ಎಸ್.ಕೆ, ಉಡುಪಿ ಸೌಹಾರ್ದ ಒಕ್ಕೂಟ ಇದರ ಅಧ್ಯಕ್ಷರಾದ ಹಂಪಾರು ಜಗನ್ನಾಥ ಶೆಟ್ಟಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಯುತ ವಿಜಯ್ ಬಿ.ಎಸ್ ಆಗಮಿಸಿದ್ದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಕ್ಷಿತ್ ಇವರು ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘವು ಆರ್ಥಿಕವಾಗಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿರುವ ಕುರಿತು ಮಂಜುನಾಥ್ ಎಸ್.ಕೆ ಹರ್ಷ ವ್ಯಕ್ತಪಡಿಸಿ ಸಹಕಾರಿಯು ಸದಸ್ಯರಿಗೆ ಉತ್ತಮ ಸೇವೆ ನೀಡಿದರೆ ಮಾತ್ರ ಪ್ರಗತಿ ಸಾಧ್ಯ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿ ರಂಗದಲ್ಲಿನ ವೈಶಿಷ್ಟ್ಯತೆಯ ಕಾರ್ಯದಕ್ಷತೆಯ ಮೂಲಕ ತಮ್ಮದೆಂಬ ಸಾಧನೀಯ ಪಯಣವನ್ನು ಸಾಧಿಸಿದ ವಿವಿಧ ಸೌಹಾರ್ದ ಸಹಕಾರಿ ಮುಖ್ಯಕಾರ್ಯನಿರ್ವಾಹಕರಿಗೆ ಸನ್ಮಾನಿಸಲಾಯಿತು ಹಾಗೂ ಶೈಕ್ಷಣಿಕವಾಗಿ ಸಾಧನೆ ಗೈದ ಕುಮಾರಿ ಸಾತ್ವಿಕ ಶ್ರೀಯನ್ ಇವರಿಗೆ ಸಂಘದ ಪರವಾಗಿ ಅಭಿನಂದಿಸಲಾಯಿತು. ಅಲ್ಲದೇ ಸಹಕಾರಿಯು ನಿರಂತರವಾಗಿ ಉತ್ತಮ ಪ್ರಗತಿ ಸಾಧಿಸುತ್ತಿರುವ ಕುರಿತು ಸಭೆಯಲ್ಲಿ ಭಾಗವಹಿಸಿದ ವಿವಿಧ ಸದಸ್ಯರು ತಮ್ಮ ಹರ್ಷವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here