ಮೂಡುಬಿದಿರೆ : ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಇಂದು ಆರದಿರಲಿ ಬದುಕು ಆರಾಧನ ತಂಡದ ಜೂನ್ ತಿಂಗಳ 111ನೇ ಯೋಜನೆಯನ್ನು ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರು ಗ್ರಾಮದ ಬೇಬಿ ಅವರು ಉಜಿರೆ ಯ S.D.M ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಲಕ್ಷಾಂತರ ರೂಪಾಯಿ ಖರ್ಚು ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಡುಬಡವರಾಗಿದ್ದು ಇವರ ಕಷ್ಟ ಅರಿತ ನಮ್ಮ ತಂಡ ಇವರಿಗೆ ಇವರ ಮಗ ಪ್ರಕಾಶ್ ದೇವಾಡಿಗ ಅವರಲ್ಲಿ ಮೂಡುಬಿದಿರೆ ಸಮಾಜ ಮಂದಿರದ ಆವರಣದಲ್ಲಿ ಧನಸಹಾಯ ನೀಡಲಾಯಿತು .
ಈ ಸಂಧರ್ಭದಲ್ಲಿ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅಭಿಷೇಕ್ ಶೆಟ್ಟಿ ಐಕಳ ಸತೀಶ್ ನಾಯ್ಕ್ ಎಡಪದವು ಪ್ರಕಾಶ್ ದೇವಾಡಿಗ ದೀನ್ ರಾಜ್ ಕೆ ಬಸವರಾಜ ಮಂತ್ರಿ ಗಣೇಶ್ ಪೈ ಬಾಸ್ಕರ ದೇವಾಡಿಗ . ಡಾ.ನಾಗರಾಜ ಶೆಟ್ಟಿ ಅಂಬೂರಿ . ಧನಂಜಯ ಶೆಟ್ಟಿ ನಿಲೇಶ್ ಕಟೀಲು ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು ದಯಾನಂದ ಮಡ್ಕೇಕರ್ ಅಗರಿ ರಾಘವೇಂದ್ರ ರಾವ್. ದಿನೇಶ್ ಸಿದ್ದಕಟ್ಟೆ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಗುರುರಾಜ್ ಮಂಗಳೂರು ಉಪಸ್ಥಿತರಿದ್ದರು.

