ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡ್ಕಿದು ಒಕ್ಕೂಟದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0
8

ಮಾಣಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ ವಲಯದ ಇಡ್ಕಿದು ಒಕ್ಕೂಟದ ತ್ರೈಮಾಸಿಕ ಸಭೆಯು ಜೂಲೈ 5 ರವಿವಾರ ಕಂಬಳಬೆಟ್ಟು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ದೇಜಪ್ಪ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ಯೋಜನೆಯಯಿಂದ ಗುಂಪುಗಳಿಗೆ ನೀಡಲಾಗುವ ಸಾಲ ಸೌಲಭ್ಯಗಳು, ಆರೋಗ್ಯ ವಿಮೆ ಹಾಗೂ ಪ್ರಸಕ್ತ ಸಾಲಿನಲ್ಲಿ ಮಾಣಿ ವಲಯ ವ್ಯಾಪ್ತಿಯಲ್ಲಿ ಯೋಜನೆಯಿಂದ ದೊರೆತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷ ಕೇಶವ ಗೌಡ ಇವರ ಉಪಸ್ಥಿತಿಯಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜಯಕರ ಪಾಂಡೇಲು ,ಉಪಾಧ್ಯಕ್ಷರಾಗಿ ಯಶೋದಾ,ಕಾರ್ಯದರ್ಶಿಯಾಗಿ ಜಯಶ್ರೀ, ಜೊತೆ ಕಾರ್ಯದರ್ಶಿಯಾಗಿ ಪಾತಿಮ, ಕೋಶಾಧಿಕಾರಿ ನಾರಾಯಣ ರವರನ್ನು ಆಯ್ಕಮಾಡಲಾಯಿತು.

ಒಕ್ಕೂಟ ಪದಾಧಿಕಾರಿಗಳಾದ ವಿನೋದ, ರೇವತಿ, ಯೋಶಿತ, ಮಾಲಿನಿ, ಬಬಿತ, ಗೀತಾ, ಸುಪ್ರಿತಾ,ಒಕ್ಕೂಟ ಸೇವಾ ಪ್ರತಿನಿಧಿ ಪುಷ್ಪಲತಾ, ಒಕ್ಕೂಟದ ಎಲ್ಲಾ ಸ್ವ ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ವಿನೋದ ಕಾರ್ಯಕ್ರಮ ನಿರೂಪಿಸಿ ದರು.

LEAVE A REPLY

Please enter your comment!
Please enter your name here