ತುಳು ಮಹಾಸಭಾ ಇಂಟರ್‌ನ್ಯಾಷನಲ್‌ನ ರಾಜ್ಯ ಅಧ್ಯಕ್ಷರಾಗಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ನೇಮಕ

0
12


ಮಂಗಳೂರು: ‘ತುಳು ಮಹಾಸಭಾ ಇಂಟರ್‌ನ್ಯಾಷನಲ್’ನ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರನ್ನು ನೇಮಕ ಮಾಡಲಾಗಿದೆ. 1928ರಲ್ಲಿ ಸ್ಥಾಪನೆಯಾಗಿ 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ‘ತುಳು ಮಹಾಸಭಾ’ದ ಜಾಗತಿಕ ಸಂಘಟನೆಯಾದ ‘ತುಳು ಮಹಾಸಭಾ ಇಂಟರ್‌ನ್ಯಾಷನಲ್’, ಕರ್ನಾಟಕ ರಾಜ್ಯ ಮಟ್ಟದ ಸಂಘಟನೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ದೇವೇಂದ್ರ ಹೆಗ್ಡೆ ಅವರನ್ನು ನೇಮಕ ಮಾಡಲಾಗಿದೆ.
ತುಳು ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹೆಗ್ಡೆ ಅವರನ್ನು, ಅವರ ಅಮೂಲ್ಯ ಸೇವೆ, ನಾಯಕತ್ವ ಗುಣಗಳು ಮತ್ತು ಸಂಘಟನಾ ಕೌಶಲಗಳನ್ನು ಪರಿಗಣಿಸಿ ಕರಾಜ್ಯ ಅಧ್ಯಕ್ಷರಾಗಿ ನೇಮಿಸಲಾಗಿದೆ.
ತುಳು ಮಹಾಸಭಾ ‘ಇಂಟರ್ ನ್ಯಾಷನಲ್‌ ಅಂತಾರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಹಾಗೂ ಕೇಂದ್ರ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here