51 ಲಕ್ಷಕ್ಕೂ ಅಧಿಕ ಹಣ ವಂಚನೆ; ಝೀನತ್​, ಸ್ನೇಹಿತೆ ವಿರುದ್ಧ ಕೇಸ್

0
46

ಉಡುಪಿ: ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, ಅದನ್ನೇ ಬ್ಲ್ಯಾಕ್​ ಮೇಲ್​ ಅಸ್ತ್ರವಾಗಿಸಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 51 ಲಕ್ಷ ರೂ. ಅಧಿಕ ಹಣ ಹಾಗೂ ಚಿನ್ನಾಭರಣ ವಂಚಿಸಿರುವ ಬಗ್ಗೆ ಝೀನತ್​ ಮತ್ತು ಸ್ನೇಹಿತೆ ಗೀತಾ ರಾವ್​ ವಿರುದ್ಧ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನಂಜೆ ನಿವಾಸಿ ತೇಜೇಶ್ವರ್​ ರಾವ್​ ವಂಚನೆಗೊಳಗಾದವರು. ತೇಜೇಶ್ವರ್​ ರಾವ್​ ಅವರು 2018 ರಿಂದ 2022 ರವರೆಗೆ ಅಂಗಡಿ ಹೊಂದಿದ್ದು, ವ್ಯವಹಾರದ ಸಮಯದಲ್ಲಿ ಆರೋಪಿಗಳಾದ ಝೀನತ್​ ಮತ್ತು ಗೀತಾರಾವ್​ ಎಂಬುವವರ ಪರಿಚಯವಾಗಿತ್ತು. ಝೀನತ್​ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ರಹಸ್ಯವಾಗಿ ವಿಡಿಯೋವೊಂದನ್ನು ಮಾಡಿಕೊಂಡಿದ್ದಳು. ಬಳಿಕ ಈ ವಿಡಿಯೋ ಇಟ್ಟುಕೊಂಡು ತೇಜೇಶ್ವರ್​ ಅವರಿಗೆ ಬ್ಲ್ಯಾಕ್​ ಮೇಲ್​ ಮಾಡಲು ಆರಂಭಿಸಿದ್ದಾಳೆ. ಮಾನಹಾನಿಗೆ ಹೆದರಿದ ಅವರಿಂದ ಹಂತ ಹಂತವಾಗಿ ಬರೋಬ್ಬರಿ 36,84,000 ರೂ. ಮೋಸದಿಂದ ಪೀಕಿದ್ದಾಳೆ. ಇದಕ್ಕೆ ಸಾಥ್​ ನೀಡಿದ 2ನೇ ಆರೋಪಿತೆ ಗೀತಾರಾವ್​ ಕೂಡ ಇದೇ ರೀತಿ ಬ್ಲ್ಯಾಕ್​ ಮೇಲ್​ ತಂತ್ರ ಉಪಯೋಗಿಸಿ ಹಂತ ಹಂತವಾಗಿ 15 ಲಕ್ಷ ರೂ. ನಗದ ಪಡೆದಿದ್ದಾಳೆ ಎಂದು ದೂರು ದಾಖಲಿಸಲಾಗಿದೆ. ನಗರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here