ಕೊಪ್ಪಳದ ಜಾನಪದ ಸಾಮ್ರಾಟ್ ಶರಣಯ್ಯ ಎನ್. ಇಟಗಿಗೆ ಅಂತರ್‌ರಾಜ್ಯ ಪ್ರಶಸ್ತಿ

0
7

ಕಾಸರಗೋಡು : ಕೊಪ್ಪಳ ಜಿಲ್ಲೆಯ ಖ್ಯಾತ ಜಾನಪದ ಕಲಾವಿದ, ಜಾನಪದ ಸಾಮ್ರಾಟ್ ಶರಣಯ್ಯ ಎನ್. ಇಟಗಿ ಅವರು ಕಾಸರಗೋಡಿನ ಕನ್ನಡ ಭವನ ನೀಡುವ ಪ್ರತಿಷ್ಠಿತ **’ಕನ್ನಡ ಪಯಸ್ವಿನಿ ಜಾನಪದ ರತ್ನ – ಅಚೀವ್‌ಮೆಂಟ್ ಅವಾರ್ಡ್-2026’**ಗೆ ಆಯ್ಕೆಯಾಗಿದ್ದಾರೆ.

ಜಾನಪದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಶರಣಯ್ಯ ಎನ್. ಇಟಗಿ ಅವರು ನೂರಾರು ಜಾನಪದ ತಂಡಗಳನ್ನು ಸಂಘಟಿಸಿ, ತರಬೇತಿ ನೀಡಿ ಬೆಳೆಸಿದ್ದಾರೆ. ಅಲ್ಲದೆ, ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದ ಜಾನಪದ ಕಲೆಯನ್ನು ಪ್ರತಿನಿಧಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಸಾಧನೆಯನ್ನು ಪರಿಗಣಿಸಿ ಈ ಅಂತರ್‌ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಈ ಕುರಿತು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾನಪದ ಕಲೆ, ಸಂಸ್ಕೃತಿ ಹಾಗೂ ಕಲಾವಿದರ ಬೆಳವಣಿಗೆಗಾಗಿ ಶರಣಯ್ಯ ಎನ್. ಇಟಗಿ ಅವರು ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಅಂತರ್‌ರಾಜ್ಯ ಗೌರವ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here