ಬೆಳುವಾಯಿ ಫ್ಲೈ ಓವರ್‌ನಲ್ಲಿ ಮಳೆನೀರು ಅವಾಂತರ : ನಿಯಂತ್ರಣ ತಪ್ಪಿ ಕಾರು ಪಲ್ಟಿ

0
52

ಮೂಡುಬಿದಿರೆ : ಮೂಡುಬಿದಿರೆ-ಕಾರ್ಕಳ ಮಾರ್ಗದ ಬೆಳುವಾಯಿ ಫ್ಲೈಓವರ್ ಆರಂಭದಲ್ಲೇ ಮಳೆನೀರು ನಿಂತಿದ್ದ ಪರಿಣಾಮ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಚಿಲಿಂಬಿ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರು ಬೆಳುವಾಯಿ ಫ್ಲೈಓವರ್ ಪ್ರವೇಶಿಸುವ ಸ್ಥಳದಲ್ಲಿ ರಸ್ತೆ ಮೇಲೆ ಮಳೆನೀರು ನಿಂತಿದ್ದರಿಂದ ಜಾರಿಕೊಂಡು ಕೆಲದೂರ ತೇಲಿದ ಬಳಿಕ ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ವೇಳೆ ಕಾರಿಗೆ ಹಾನಿಯಾಗಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರಿಗೆ ನೆರವು ನೀಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ, ಮಳೆಗಾಲದಲ್ಲಿ ಬೆಳುವಾಯಿ ಫ್ಲೈಓವರ್ ಆರಂಭದ ಭಾಗದಲ್ಲಿ ಪದೇಪದೇ ಮಳೆನೀರು ಸಂಗ್ರಹವಾಗುತ್ತಿದ್ದು, ಇದೇ ಕಾರಣದಿಂದ ವಾಹನ ಸವಾರರು ಅಪಾಯವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here