ಜುಲೈ 12ರಂದು ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿ ಉದ್ಘಾಟನೆ

0
26

ಅಲಯನ್ಸ್ ಕ್ಲಬ್ ಮಂಗಳೂರು ಆತಿಥ್ಯ ದಲ್ಲಿ ಹೊಸ ಕ್ಲಬ್ ಅಲಯನ್ಸ್ ಕ್ಲಬ್ ಉಡುಪಿ ಚಿಟ್ಪಾಡಿ ಉದ್ಘಾಟನೆ ಜುಲೈ 12,2026ನೇ ಆದಿತ್ಯವಾರ ಸಂಜೆ 6.30 ಕೆ ಹೊಟೇಲ್ ದುರ್ಗಾ ಇಂಟರ್ನ್ಯಾಷನಲ್ ಉಡುಪಿಯಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಜಿಲ್ಲೆ275 ಉಡುಪಿ ಜಿಲ್ಲೆ ರಾಜ್ಯಪಾಲರಾದ ಅಲೈ LMF ಸುನಿಲ್ ಕುಮಾರ್ ಶೆಟ್ಟಿ ಯವರು ಉದ್ಘಾಟಿಸಿ ಪದಗ್ರಹಣ ಸಮಾರಂಭ ನಡೆಸಿ ಕೊಡಲಿದ್ದಾರೆ .

ಮುಖ್ಯ ಅತಿಥಿಗಳಾಗಿ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ನಿರ್ದೆಶಕರಾದ ಅಲೈ ಡಿ ಶ್ರೀಧರ ಶೇಣವ, ಅಂತರಾಷ್ಟ್ರೀಯ ಕಮಿಟಿ ಚೆಯರ್ಮೆನ್ ಅಲೈ ಡಾ ತಲ್ಲೂರು ಶಿವರಾಮ ಶೆಟ್ಟಿ, ಅಂತರಾಷ್ಟ್ರೀಯ ಪೂರ್ವ ನಿರ್ಧೆಶಕ ಬೆಳುಗಂ ಅಲೈ ನವೀನ್ ಶೆಟ್ಟಿಗಾರ್,ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಅಲೈ ಸುನೀಲ್ ಸಾಲಿಯಾನ್ ಪಧಮ ಉಪ ರಾಜ್ಯಪಾಲ ರಾದ ಅಲೈ ಕೆ ಸುಧಾಕರ ಹೆಗ್ಡೆ, 2ನೇ ಉಪ ರಾಜ್ಯಪಾಲ ಅಲೈ ಗೀತಾ ಅಶೋಕ ಕುಮಾರ್ ವೈ ಜೆ, ಪಾಂತೃಧ್ಯಕ್ಷ ಅಲೈ ಡಾ ಸಂತೋಷ ಕುಮಾರ್,ವಲಯಧ್ಯಕ್ಷ ಅಲೈ ಗಾಯತ್ರಿ ಸಂತೋಷ್, ಹೊಸ ಕ್ಲಬ್ ನ ಪ್ರಾಯೋಜಕರ ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಅಲೈ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು ಮುಂತಾದವರು ಭಾಗವಹಿಸಲಿದ್ದಾರೆ ವೆಂಬುದಾಗಿ ಅಲಯನ್ಸ್ ಕ್ಲಬ್ ಉಡುಪಿ ಚಿಟುಪಾಡಿ ಅಧ್ಯಕ್ಷ ಅಲೈ ಸುರೇಖಾ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here