60 ಲಕ್ಷ ರೂಪಾಯಿ ವೆಚ್ಚದ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

0
12

ಕಾಪು : ವಿಧಾನಸಭಾ ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ 60 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ 29-10-2026 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡು ಪಲಿಮಾರು ವಾರ್ಡ್ ನ ನಂಬಿಯಾರ್ ಕ್ಲಿನಿಕ್ ನಿಂದ ಪಲಿಮಾರು ಮಠದ ರಸ್ತೆ ಅಭಿವೃದ್ಧಿ – 20 ಲಕ್ಷ, ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಎದುರುಗಡೆಯಿಂದ ಸುಕೇಶ್ ಕುಲಾಲ್ ಮನೆ ವರೆಗೆ ಬಳಿ ನೀರಿನ ತೋಡಿಗೆ ತಡೆಗೋಡೆ ನಿರ್ಮಾಣ – 20 ಲಕ್ಷ, ಅವರಾಲು ಮಟ್ಟು ಕೋಡ್ದಬ್ಬು ದೈವಸ್ಥಾನದಿಂದ ಸುರೇಶ್ ಪೂಜಾರಿ ಪೂಜಾರಿ ಮನೆ ವರೆಗೆ ರಸ್ತೆ ಅಭಿವೃದ್ಧಿ – 20 ಲಕ್ಷ ಸೇರಿದಂತೆ ಒಟ್ಟು 60 ಲಕ್ಷ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ನೀತಾ ಗುರುರಾಜ್, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸೌಮಲತಾ ಶೆಟ್ಟಿ, ಗಾಯತ್ರಿ ಪ್ರಭು, ಮಧುಕರ ಸುವರ್ಣ, ಜಿತೇಂದ್ರ ಫುಟಾರ್ಡೋ, ಉಪಾಧ್ಯಕ್ಷರಾದ ರಾಯೇಶ್ ಪೈ, ಸುಮಂಗಲ ದೇವಾಡಿಗ, ಮಾಜಿ ಸದಸ್ಯರಾದ ಪ್ರೀಯಾ ಶೆಟ್ಟಿ, ಸುಜಾತ, ಪ್ರವೀಣ್ ಪೂಜಾರಿ, ವಾಸುದೇವ ಪಲಿಮಾರು, ಹರೀಶ್ ಅಮೀನ್, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಕ್ತಿ ಕೇಂದ್ರದ ಪ್ರಮುಖ್ ಕನಿಷ್ಕ ಶೆಟ್ಟಿ, ಪ್ರಸಾದ್ ಪಲಿಮಾರು, ಸ್ಥಳೀಯರಾದ ಭಾಸ್ಕರ್ ಪ್ರಭು, ಪ್ರಭಾ ನಂಬಿಯಾರ್ ಹಾಗೂ ಪಕ್ಷದ ಹಿರಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.