ಸಾಂಪ್ರದಾಯಕ ಕಲೆ ಸಂರಕ್ಷಣಾ ಸಂಸ್ಥೆ ತಿರುಪತಿ,ಇವರಿಂದ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆಂಧ್ರ ಪ್ರದೇಶದ ಪಲಮನೆರ್ ಲಯನ್ಸ್ ಸೇವಾ ಕೇಂದ್ರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪೋಸಲ ರವಿಯವರು ಅಧ್ಯಕ್ಷತೆಯಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.

ಉತ್ತರ ಭಾರತದ ಕರ್ನಾಟಕ, ಆಂಧ್ರಪ್ರದೇಶ,ತಮಿಳುನಾಡು, ಕೇರಳದ 40 ಕ್ಕೂ ಮಿಕ್ಕಿ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಳಿಗ್ಗಿನ ಪೂಜಾ ವಿಧಿವಿಧಾನಗಳ ನಂತರ ಪ್ರಶಸ್ತಿ ವಿಜೇತರುಗಳ ಪಾದ ಪೂಜೆಯನ್ನು ಮಾಡವಲ್ಲಿ ಚಿರಂಜೀವಿ ದಂಪತಿಗಳು ನೆರವೇರಿಸಿದರು. ಹಲವು ಕವಿಗಳು ತಮ್ಮ ಕವನ ವಾಚನ ವನ್ನು ಮಾಡಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಿದರು.ಈ ಕಾರ್ಯಕ್ರಮದಲ್ಲಿ ಕೇರಳದಿಂದ ತುಲು ಸಾಹಿತಿ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

