ತುಳು ರಂಗಭೂಮಿಯ ಹಿರಿಯ ಕಲಾವಿದ ಪರಮಾನಂದ ಸಾಲಿಯಾನ್ ಸಸಿಹಿತ್ಲುಗೆ ಭಾವಪೂರ್ಣ ವಿದಾಯ

0
7

ಮೂಲ್ಕಿ; ಹಿರಿಯ ರಂಗಕರ್ಮಿ, ಪತ್ರಕರ್ತ, ಸಾಹಿತಿ ಪರಮಾನಂದ ಸಾಲಿಯಾನ್ ಸಸಿಹಿತ್ಲು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ಸಸಿಹಿತ್ಲು ಅವರ ಸ್ವಗೃಹದಲ್ಲಿ ನಡೆಯಿತು, ಹಿಂದು ಸಂಪ್ರದಾಯದಂತೆ ಅವರ ಪಾರ್ಥಿವ ಶರೀರದ ವಿಧಿವಿಧಾನಗಳು ನಡೆದವು. ಸುಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಸಾಹಿತಿ, ನಟ, ನಿರ್ದೇಶಕ ಹೀಗೆ ರಂಗಭೂಮಿಯ ಎಲ್ಲಾ ವಿಭಾಗಳಲ್ಲಿ ಗುರುತಿಕೊಂಡಿದ್ದ ಪರಮಾನಂದ ಸಾಲಿಯಾನ್ ಅವರು ತುಳುರಂಗಭೂಮಿಯಲ್ಲಿ ದಾಖಲೆ ಬರೆದ ಶಿವದೂತೆ ಗುಳಿಗೆಯ ಸಂಭಾಷಣೆ ಬರೆದಿದ್ದರು.

ಈ ಸಂದರ್ಭಮೂಲ್ಕಿ ಮೂಡಬಿದ್ರೆ ಶಾಸಕ ಶಾಸಕ ಉಮಾನಾಥ ಕೋಟ್ಯಾನ್, ಸಸಿಹಿತ್ಲು ಭಗವತೀ ಕ್ಷೇತ್ರದ ಶ್ರೀನಿವಾಸ ಯಾನೇ ಅಪ್ಪು ಪೂಜಾರಿ, ಕಾಂಗ್ರೇಸ್ ಮುಖಂಡರಾದ ಅರ್ ಪದ್ಮರಾಜ್, ವಿನಯ ಕುಮಾರ್ ಸೊರಕೆ, ಸತ್ಯಜಿತ್ ಸುರತ್ಕಲ್, ವಸಂತ ಬೆರ್ನಾಡ್, ಮೋಹನ್ ಕೋಟ್ಯಾನ್, ಕಸ್ತೂರಿ ಪಂಜ, ಜಗನ್ನಾಥ ಕೋಟ್ಯಾನ್, ಗಣೇಶ್ ಅಮೀನ್ ಸಂಕಮಾರ್, ಕೆಕೆ ಪೇಜಾವರ, ಸೀತಾರಾಮ‌ಕುಮಾರ್ ಕಟೀಲ್, ಲಾಲಾಜಿ‌ ಮಡನ್, ಗಿರೀಶ್ ಶ್ರೀಯಾನ್, ತಾರಾನಾಥ ಗಟ್ಟಿ, ಶೋಭೇಂದ್ರ ಸಸಿಹಿತ್ಲು, ವಾಮನ್ ಇಡ್ಯ, ಪೂರ್ಣಿಮಾ ಉದಯ್, ಬಾಸ್ಕರ ಸಾಲಿಯಾನ್, ಜಯಕೃಷ್ಣಕೋಟ್ಯಾನ್, ಪ್ರಕಾಶ್ ಕುಮಾರ್ ಬಿ.ಎನ್, ಅಶೋಕ್ ಕುಮಾರ್ ಶೆಟ್ಟಿ, ಧನಂಜಯ ಮಟ್ಟು, ಹರ್ಷರಾಜ್ ಶೆಟ್ಟಿ, ಧನ್ ರಾಜ್ ಕೋಟ್ಯಾನ್ ಸಸಿಹಿತ್ಲು, ಚಂದ್ರಶೇಖರ ಸುವರ್ಣ, ಚಂದ್ರಶೇಖರ ನಾನೀಲ್, ವಿ.ಕೆ.ಯಾದವ್, ದೀಪಕ್ ಪೆರ್ಮುದೆ, ವಿಜಯಕುಮಾರ್ ಕುಬೆವೂರು, ಧರ್ಮಾನಂದ ಶೆಟ್ಟಿಗಾರ್, ನಿರಂಜನ ಬಂಗೇರ, ದಯಾನಂದ ಗುರಿಕಾರ, ಅನೀಲ್ ಪೂಜಾರಿ ಸಸಿಹಿತ್ಲು, ಚಂದ್ರಕುಮಾರ್ ಕೊಡಿಯಾಲ್ ಬೈಲ್, ವಿಜಯ್ ಕೋಕಿಲ, ಗೋಪಿನಾಥ ಪಡಂಗ ವಿವಿಧ ಕ್ಷೇತ್ರದ ಗಣ್ಯರು, ಸಾಹಿತಿಗಳು ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here