ಶ್ರೀ ಶಾರದಾಂಬ ನವ ಜೀವನ ಸಮಿತಿ ಕಾಡಬೆಟ್ಟು, ವಗ್ಗ ಸದಸ್ಯರ ಸಭೆ

0
20

ಕಾಡಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್( ರಿ.) ಬಂಟ್ವಾಳ ಇದರ ವಗ್ಗ ವಲಯದ ಶ್ರೀ ಶಾರದಾಂಬ ನವ ಜೀವನ ಸಮಿತಿಯ ಸದಸ್ಯರ ಸಭೆ ಕಾಡಬೆಟ್ಟು ವಗ್ಗ ವಲಯ ಕಚೇರಿಯಲ್ಲಿ ಜೂಲೈ 12 ರವಿವಾರ ನಡೆಯಿತು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯನಂದ ಪಿ ನವ ಜೀವನ ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡಿ, ಯೋಜನೆಯಿಂದ ಸಮಿತಿಯ ಸದಸ್ಯರಿಗೆ ಸಿಗುವ ಸಹಕಾರ ದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನವಜೀವನ ಸದಸ್ಯರು ತಮ್ಮ ತಮ್ಮ ಅನಿಸಿಕೆ ಯನ್ನು ವ್ಯಕ್ತಪಡಿಸಿದರು. ನಂತರ ಸದಸ್ಯರೆಲ್ಲರೂ ಸೇರಿ ಭಜನಾ ಕಾರ್ಯಕ್ರಮ ನೆರೆವೇರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶಾರದಾಂಬ ನವಜೀವನ ಸಮಿತಿಯ ಅಧ್ಯಕ್ಷರಾದ ಮಹಾಬಲ ಪೂಜಾರಿ, ವಾರದ ಸಭೆಯ ಅಧ್ಯಕ್ಷರಾದ ಲಿಂಗಪ್ಪ ಗೌಡ, ವಗ್ಗ ವಲಯ ಮೇಲ್ವಿಚಾರಕ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯ ಪ್ರವೀಣ್ , ನವ ಜೀವನ ಸದಸ್ಯರು, ಒಕ್ಕೂಟ ಸೇವಾ ಪ್ರತಿನಿಧಿಗಳಾದ ರಜನಿ, ರೇಖಾ ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here