ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಊರ ದಾನಿಗಳ ನೆರವಿನಿಂದ ಮಾರೂರಿನ ವಸತಿ ರಹಿತ ನಿಷ್ಣಾತ ಕುಶಲಕರ್ಮಿ ಶ್ರೀಮತಿ ಸರಸ್ವತಿ ಸದಾಶಿವ ಆಚಾರ್ಯರ ಕುಟುಂಬಕ್ಕೆ ನಿರ್ಮಿಸಿ ಕೊಟ್ಟಿರುವ ವಾಸಯೋಗ್ಯ ಸುಂದರವಾದ ಮನೆ “ಶ್ರೀ ಕಾಳಿಕಾಂಬ”ದ ಹಸ್ತಾಂತರ ಕಾರ್ಯಕ್ರಮವು ಜು. 8ರಂದು ಅಪರಾಹ್ನ ಮಾರೂರಿನಲ್ಲಿ ಜರಗಿತು.
ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಜೋಯೆಲ್ ಡಿಸೋಜ ಅವರು ಮಾತನಾಡಿ ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ರೋಟರಿ ಸಂಸ್ಥೆಗಳು ದಾನಿಗಳ ನೆರವನ್ನು ಒಟ್ಟುಗೂಡಿಸಿ ಸೂರನ್ನು ಕಲ್ಪಿಸುವುದು ಅತ್ಯುತ್ತಮ ಸೇವೆಯಾಗಿದ್ದು ಇಂತಹ ಸೇವಾಕಾರ್ಯ ಮಿಡ್ ಟೌನ್ ರೋಟರಿಯಿಂದ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ದಾನಿ ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸೂರಿಲ್ಲದ ಮಾರೂರಿನ ಸಾತ್ವಿಕ ಸರಸ್ವತಿ ಸದಾಶಿವ ಆಚಾರ್ಯರ ಕುಟುಂಬವನ್ನು ಗುರುತಿಸಿ ಅವರಿಗೆ ಸೂರು ಒದಗಿಸಿರುವುದು ಭಗವಂತ ಮೆಚ್ಚುವ ಕೆಲಸವನ್ನು ರೋಟರಿಯಂತ ಸಮಾಜ ಸೇವಾ ಸಂಸ್ಥೆಗಳು ಮತ್ತು ಈ ಬಗ್ಗೆ ಮುತುವರ್ಜಿ ವಹಿಸಿದ ಜೈಕನ್ನಡಾಂಬ ಪತ್ರಿಕೆಯ ಪ್ರಮುಖ ವರದಿಗಾರರಾದ ಕೃಷ್ಣ ಕುಮಾರ್ ರವರನ್ನು ಅಭಿನಂದಿಸಿದರು.
ರೋಟರಿ ಜಿಲ್ಲೆ 3181 ವಲಯ 1ರ ಮಾಜಿ ಅಸಿಸ್ಟೆಂಟ್ ಗವರ್ನರ್ ರೋಬರ್ಟ್ ಫ್ರಾಂಕ್ಲಿನ್ ರೇಗೋ, ಮಿಡ್ ಟೌನ್ ರೋಟರಿಯ ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನೆಯ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರಮುಖ ದಾನಿ ಇರುವೈಲು ಕುಮಾರ ಪೂಜಾರಿ, ಪವರ್ ಫ್ರೆಂಡ್ಸ್ ಬೆದ್ರ ಸಂಸ್ಥೆಯ ಅಧ್ಯಕ್ಷ ವಿನಯಕುಮಾರ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಅವರನ್ನು ಬಲಿಪ ಪ್ರಸಾದ ಭಾಗವತ ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು. ದಾನಿಗಳಾದ ಸಿ. ಎಚ್. ಅಬ್ದುಲ್ ಗಫೂರ್, ತುಳುನಾಡ ಸೇನೆಯ ಸಂಸ್ಥಾಪಕ ಸುರೇಶ್ ಶೆಟ್ಟಿ ಹರಿಮೀನಾಕ್ಷಿಯವರ ಪರವಾಗಿ ಲಕ್ಷ್ಮೀಶ ಶೆಟ್ಟಿ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಧ್ಯಕ್ಷ ಸುನಿಲ್ ಮೆಂಡೋನ್ಸಾ ಮತ್ತಿತರ ದಾನಿಗಳನ್ನು ಗೌರವಿಸಲಾಯಿತು. ರೋಟರಿ ಮಿಡ್ ಟೌನ್‌ನ ನೂತನ ಅಧ್ಯಕ್ಷ ಮುರಳೀದರ ಕೋಟ್ಯಾನ್, ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ, ಅಭಿನಂದನ್ ಬಲ್ಲಾಳ್, ವಲಯ ಸೇನಾನಿ ವಿದೇಶ್ ಎಂ., ಸುಶಾಂತ ಕರ್ಕೇರ, ಸ್ಥಾಪಕ ಅಧ್ಯಕ್ಷ ಮಹಮ್ಮದ್ ಅಸ್ಲಮ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪ್ರಮುಖರಾದ ಗಣೇಶ್ ನಾಯಕ್ ಬಾರ್ದಿಲ,ಮೂಡುಬಿದಿರೆಯ ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕಾರ್ ಶಂಕರ ಆಚಾರ್ಯ ಮಾರೂರು ಉಪಸ್ಥಿತರಿದ್ದರು. ಲಯನ್ಸ್ ಸಂಸ್ಥೆಯ ಆಲ್ವಿನ್ ಮಿನೇಜಸ್ ಸನ್ಮಾನಪತ್ರ ವಾಚಿಸಿದರು. ರೋಟರಿಯ
ಪ್ರಶಾಂತ್ ಕೆ. ಭಂಡಾರಿ ಮತ್ತು ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಊರ ದಾನಿಗಳ ನೆರವಿನಿಂದ ಮಾರೂರಿನ ವಸತಿ ರಹಿತ ನಿಷ್ಣಾತ ಕುಶಲಕರ್ಮಿ ಶ್ರೀಮತಿ ಸರಸ್ವತಿ ಸದಾಶಿವ ಆಚಾರ್ಯರ ಕುಟುಂಬಕ್ಕೆ ನಿರ್ಮಿಸಿ ಕೊಟ್ಟಿರುವ ವಾಸಯೋಗ್ಯ ಸುಂದರವಾದ ಮನೆ “ಶ್ರೀ ಕಾಳಿಕಾಂಬ”ದ ಹಸ್ತಾಂತರ ಕಾರ್ಯಕ್ರಮವು ಜು. 8ರಂದು ಅಪರಾಹ್ನ ಮಾರೂರಿನಲ್ಲಿ ಜರಗಿತು.
ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಿ ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಜೋಯೆಲ್ ಡಿಸೋಜ ಅವರು ಮಾತನಾಡಿ ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ರೋಟರಿ ಸಂಸ್ಥೆಗಳು ದಾನಿಗಳ ನೆರವನ್ನು ಒಟ್ಟುಗೂಡಿಸಿ ಸೂರನ್ನು ಕಲ್ಪಿಸುವುದು ಅತ್ಯುತ್ತಮ ಸೇವೆಯಾಗಿದ್ದು ಇಂತಹ ಸೇವಾಕಾರ್ಯ ಮಿಡ್ ಟೌನ್ ರೋಟರಿಯಿಂದ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ದಾನಿ ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ, ಸೂರಿಲ್ಲದ ಮಾರೂರಿನ ಸಾತ್ವಿಕ ಸರಸ್ವತಿ ಸದಾಶಿವ ಆಚಾರ್ಯರ ಕುಟುಂಬವನ್ನು ಗುರುತಿಸಿ ಅವರಿಗೆ ಸೂರು ಒದಗಿಸಿರುವುದು ಭಗವಂತ ಮೆಚ್ಚುವ ಕೆಲಸವನ್ನು ರೋಟರಿಯಂತ ಸಮಾಜ ಸೇವಾ ಸಂಸ್ಥೆಗಳು ಮತ್ತು ಈ ಬಗ್ಗೆ ಮುತುವರ್ಜಿ ವಹಿಸಿದ ಜೈಕನ್ನಡಾಂಬ ಪತ್ರಿಕೆಯ ಪ್ರಮುಖ ವರದಿಗಾರರಾದ ಕೃಷ್ಣ ಕುಮಾರ್ ರವರನ್ನು ಅಭಿನಂದಿಸಿದರು.
ರೋಟರಿ ಜಿಲ್ಲೆ 3181 ವಲಯ 1ರ ಮಾಜಿ ಅಸಿಸ್ಟೆಂಟ್ ಗವರ್ನರ್ ರೋಬರ್ಟ್ ಫ್ರಾಂಕ್ಲಿನ್ ರೇಗೋ, ಮಿಡ್ ಟೌನ್ ರೋಟರಿಯ ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನೆಯ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರಮುಖ ದಾನಿ ಇರುವೈಲು ಕುಮಾರ ಪೂಜಾರಿ, ಪವರ್ ಫ್ರೆಂಡ್ಸ್ ಬೆದ್ರ ಸಂಸ್ಥೆಯ ಅಧ್ಯಕ್ಷ ವಿನಯಕುಮಾರ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಅವರನ್ನು ಬಲಿಪ ಪ್ರಸಾದ ಭಾಗವತ ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು. ದಾನಿಗಳಾದ ಸಿ. ಎಚ್. ಅಬ್ದುಲ್ ಗಫೂರ್, ತುಳುನಾಡ ಸೇನೆಯ ಸಂಸ್ಥಾಪಕ ಸುರೇಶ್ ಶೆಟ್ಟಿ ಹರಿಮೀನಾಕ್ಷಿಯವರ ಪರವಾಗಿ ಲಕ್ಷ್ಮೀಶ ಶೆಟ್ಟಿ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಧ್ಯಕ್ಷ ಸುನಿಲ್ ಮೆಂಡೋನ್ಸಾ ಮತ್ತಿತರ ದಾನಿಗಳನ್ನು ಗೌರವಿಸಲಾಯಿತು. ರೋಟರಿ ಮಿಡ್ ಟೌನ್‌ನ ನೂತನ ಅಧ್ಯಕ್ಷ ಮುರಳೀದರ ಕೋಟ್ಯಾನ್, ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ, ಅಭಿನಂದನ್ ಬಲ್ಲಾಳ್, ವಲಯ ಸೇನಾನಿ ವಿದೇಶ್ ಎಂ., ಸುಶಾಂತ ಕರ್ಕೇರ, ಸ್ಥಾಪಕ ಅಧ್ಯಕ್ಷ ಮಹಮ್ಮದ್ ಅಸ್ಲಮ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪ್ರಮುಖರಾದ ಗಣೇಶ್ ನಾಯಕ್ ಬಾರ್ದಿಲ,ಮೂಡುಬಿದಿರೆಯ ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕಾರ್ ಶಂಕರ ಆಚಾರ್ಯ ಮಾರೂರು ಉಪಸ್ಥಿತರಿದ್ದರು. ಲಯನ್ಸ್ ಸಂಸ್ಥೆಯ ಆಲ್ವಿನ್ ಮಿನೇಜಸ್ ಸನ್ಮಾನಪತ್ರ ವಾಚಿಸಿದರು. ರೋಟರಿಯ
ಪ್ರಶಾಂತ್ ಕೆ. ಭಂಡಾರಿ ಮತ್ತು ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.