ಮುಂಡುಗೋಡ : ಬೆಂಗಳೂರು ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ರಾಷ್ಟ್ರೀಯ ನೃತ್ಯ ಕಲಾ ವೈಭವ -2026. ರಾಜಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರತಿಕ್ಷ ಅನಿಲ್ ಸುಭಿಕ್ಷಾ ಅನಿಲ್ ಅಕ್ಕ ತಂಗಿಯಂದಿರ ಇಕಲೆಯನ್ನು ಗುರುತಿಸಿ ರಾಷ್ಟ್ರೀಯ ಕಲಾ ರತ್ನ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಕಲಾಚೇತನ ರಾಜ್ಯ ಪ್ರಶಸ್ತಿಯನ್ನು ಎಲ್ಲ ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.
ಈ ಕಾರ್ಯಕ್ರಮ ವನ್ನು ರಾಜ್ಯ ಸಂಸ್ಕೃತಿಕ ಕಲಾವಿದರ ಒಕ್ಕೂಟ ಬೆಂಗಳೂರಿನ ಅಧ್ಯಕ್ಷ ಡಾ. ಜಯಸಿಂಹ ಎಸ್ ಉದ್ಘಾಟಿಸಿದರು. ಬೆಂಗಳೂರು ಪತ್ರಕರ್ತರ ವೇದಿಕೆ ಅಧ್ಯಕ್ಷ ಮಹೇಶ್ ಬಾಬು ಸರ್ವೆ, ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ವೀಣಾ ಕಿಡಿದಾಳ, ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್ ವಾಗ್ಮಡ್ ಉಪಸ್ತರಿದ್ದರು. ಇವರು ನಾಟ್ಯ ಮಯೂರಿ ನೃತ್ಯ ಕಲಾ ಕೇಂದ್ರ ಮುಂಡುಗೋಡ ಗುರುಗಳು ಶಶಿರೇಖಾ ಬೈಜು ಶಿಷ್ಯರು.

