ದಾವಣಗೆರೆ : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಘಕಟದ ಆಶ್ರಯದಲ್ಲಿ ಕುಂಬೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ನ್ಯಾಯವಾದಿಗಳು ಸುಪ್ರಸಿದ್ದ ಹರಿಕಥಾ ಕಲಾವಿದರಾದ ಶಂನಾಡಿಗ ಕುಂಬಳೆ ಉದ್ಘಾಟಿಸಿ ಮಾತನಾಡುತ್ತಾ ಅಂಇನ ಕುಂಬಳೆ ರಾಜ್ಯಕ್ಕೆ ಸೇರಿದ ಈ ದೇವಸ್ಥಾನದಲ್ಲಿ ಈ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮರ್ಥನೀಯ. ನಮ್ಮ ಪ್ರಾದೇಶಿಕ ಹಿನ್ನೆಲೆಗೆ ಸಂಬAಧಿಸಿದ ಚರಿತ್ರೆಯನ್ನು ಇಲ್ಲಿ ಮೆಲುಕು ಹಾಕುವುದು ಸೂಕ್ತ ಎಂದರು.
ಉಪನ್ಯಾಸ ನೀಡಿದ ಎಡನಾಡು ಕೃಷ್ಣಮೋಹನ್ ಭಟ್ ಮಾತನಾಡಿ, ಶ್ರೀರಾಮ ನಡೆದಾಡಿದ ನೆಲವಿದು. ಇದು ದ್ವಾಪರದಲ್ಲಿ ಧರ್ಮರಾಜನ ಆಡಳಿತಕ್ಕೊಳಪಟ್ಟಿತ್ತು ಎಂಬು ಐತಿಹಾಸಿಕವಿದೆ. ಹಳೇ ಕಾಲದಲ್ಲಿ ಚೇರರು ಪಾಂಡ್ಯರ ಆಡಳಿತದಲ್ಲಿದ್ದ ಮೂವರು ಕದಂಬ ವಂಶದ ಜಯಸಿಂಹ ಅರಸರು ಆಳ್ವಿಕೆ ನಡೆಸಿದ್ದು ಒಂದು ಚರಿತ್ರೆ 15ನೇಯ ಶತಮಾನದಿಂದ ಮಾಯಿಪ್ಪಾಡಿ ಮನೆತನದ ರಾಮಂತರ ಅರಸರು ಉಸ್ತುವಾರಿ ವಹಿಸಿದ್ದರು.
ಇಷ್ಟರೊಳಗೆ ಈ ಪ್ರದೇಶದ ಧಾರ್ಮಿಕ ಸಾಂಸ್ಕೃತಿಕ ವಲಯಗಳಲ್ಲಿ ಬಹಳಷ್ಟು ಉನ್ನತಿ ಆಗಿತ್ತು. ಪರಶುರಾಮ ಸೃಷ್ಟಿಯೊಂದಿಗೆ ಪೌರಾಣಿಕ ಮಾನ್ಯತೆ ಪಡೆದಿದ್ದು ಈ ಪವಿತ್ರವದ ಭೂಮಿ 2ನೇ ಜಯಸಿಂಹನ ಕಾಲದಲ್ಲಿ ಮಧ್ವಮತದ ಪ್ರಚಾರ ಕುಂಬಳ ದೇವಾಲಯ ಉದ್ದಾರ ಕಾರ್ಯ ಆಗಿತ್ತು. ಅಡೂರು ಕುಮಾರ ಮಂಗಲ ದೇವಾಲಯದ ಹಿನ್ನೆಲೆ ಅರಿಕ್ಕಾಡಿ ಕಂಬಕಟ್ಟೆಗಳಲ್ಲಿ ಅರಮನೆಗಳ ನಿರ್ಮಾಣ ಅನಂತಪುರದ ಭವ್ಯ ಮೊಸಳೆಗಳ ಕಥೆಗಳನ್ನು ವಿವರಿಸಿದರು. ತನ್ನ ರ್ತೀರೂಪರು ಮಯಿಪ್ಪಾಡಿ ವೆಂಕಟೇಶ ವರ್ಮರಾಜರ ಕಾರ್ಯದರ್ಶಿ ಆಗಿದ್ದರು ಎಂದರು.
ಕವಿ ರಾಧಾಕೃಷ್ಣ ಉಳಿಯತ್ತಡ್ಕ ಸಂವಾದದಲ್ಲಿ ಭಾಗವಹಿಸಿ ಇಂತಹ ವೇದಿಕೆಯಲ್ಲಿ ಚಾರಿತ್ರಿಕ ಅಂಶಗಳನ್ನು ಚರ್ಚಿಸಿದಾಗ ಸಮರ್ಪಕವಾದ ಲೇಖನ ಮೂಡಿ ಬರಲು ಸಹಾಯಕವಾಗಬೇಕಾಗಿದೆ ಎಂದರು. ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸ್ಥಾಪಕ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್‌ರವರು ಉಪಸ್ಥಿತರಿದ್ದರು. ಉಪನ್ಯಾಸದ ಮೊದಲು ಭಗವದ್ಗೀತಾ ಪಾರಾಯಣ ಜರುಗಿತು ಕಲಾಕುಂಚ ಗೌರವ ಅಧ್ಯಕ್ಷರಾದ ವಿ.ಬಿ.ಕುಳಮರ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನಾ ಹೆಬ್ಬಾರ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಐತಿಹಾಸಿಕ ಪರಂಪೆಯ ಉಪನ್ಯಾಸಕ್ಕೆ ರಾಜಾರಾಮ್ ರಾವ್ ಸ್ವಾಗತಿಸಿದರು. ಕೊನೆಯಲ್ಲಿ ಜಯಲಕ್ಷ್ಮೀ ರಾಮಚಂದ್ರ ಹೊಳ್ಳ ವಂದಿಸಿದರು.

