ಯಶಸ್ವಿಯಾದ ಗುರುಪೂರ್ಣಿಮೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ

0
19

ದಾವಣಗೆರೆ : ಆಧ್ಯಾತ್ಮ ಪರಂಪರೆಯ ಕ್ರಿಯಾತ್ಮಕ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದ ಆಶ್ರಯದಲ್ಲಿ ಪ್ರತೀ ತಿಂಗಳು ಹುಣ್ಣಿಮೆಯಂದು ನಿರಂತರ 26 ವರ್ಷಗಳಿಂದ ನಡೆದು ಬಂದ ಶ್ರೀ ಗಾಯತ್ರಿ ಪೂಜೆ ಉಪಾಸನೆ ಈ ತಿಂಗಳ ಗುರು ಪೂರ್ಣಿಮೆ ಪ್ರಯುಕ್ತ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರಮಠದ ಸಭಾಂಗಣದಲ್ಲಿ ನಡೆದ ಈ ಧಾರ್ಮಿಕ ಸೇವೆ ಪೂಜೆ ಯಶಸ್ವಿಯಾಗಿ ನಡೆಯಿತು ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.

ಪರಿವಾರದ ಗೌರವ ಅಧ್ಯಕ್ಷರಾದ ಡಾ|| ರಮೇಶ್ ಪಾಟೀಲ್ ಮತ್ತು ಕುಟುಂಬ ಹಾಗೂ ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಮತ್ತು ಕುಟುಂಬ ಪೂಜೆ ಸಲ್ಲಿಸಿದ್ದಾರೆ.

ಪರಿವಾರದ ಸಂಚಾಲಕರಾದ ಭಾವನ್ನಾರಾಯಣ, ಸತೀಶ್ ಆರ್.ಎಂ., ಗೌರವ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ಗಾಯಿತ್ರಿ ಚನ್ನಬಸಪ್ಪ, ಎಂ.ಎಸ್.ಪ್ರಸಾದ್, ಖಜಾಂಚಿ ಪುರು ಷೋತ್ತಮ ಪಟೇಲ್, ವಿ.ಕೃಷ್ಣಮೂರ್ತಿ, ಸತ್ಯನಾರಾಯಣ ಮೂರ್ತಿ, ಡಾ|| ಸುಶೀಲಮ್ಮ, ಶಿವಕುಮಾರ್, ವಂದನಾ ಶ್ರೀಧರ್ ನಾಯಕ್, ಮಾಲತೇಶ್ ಎಸ್.ಕುಲಕರ್ಣಿ, ರಾಧಾ ಕೃಷ್ಣ, ಶಾಂತಾರಾಮ್ ಸೋಮಯಾಜಿ ಮುಂತಾದವರು ಉಪಸ್ಥಿತರಿದ್ದರು.