ಉಡುಪಿ : ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವ , ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕ ನಡೆಯಿತು , ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ , ಮಹಾ ಮಂಗಳಾರತಿ ಜರಗಿತು.

ಭಜನಾ ಮೋಹೋತ್ಸವ ಕೆ ಮಂದಿರದ ಅರ್ಚಕರಾದ ಸತ್ಯೇಂದ್ರ ಮಹಾರಾಜ್ ದೀಪ ಬೆಳಗಿಸಿ ಚಾಲನೆ ನೀಡಿದರು . ಟ್ರಸ್ಟಿಗಳಾದ ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು , ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ವಿಜಿ ಶೆಟ್ಟಿ , ವಿಶ್ವನಾಥ್ ಸನಿಲ್ , ಶ್ರೀಮತಿ ಬಿಂದು ಶೆಟ್ಟಿ , ಹರ್ಷದ ಸೂರ್ಯ ಪ್ರಕಾಶ್ , ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರ ನಂಬಿಯಾರ್ , ತಾರಾನಾಥ್ ಮೇಸ್ತ , ಅರ್ಚಕರಾದ ಸುಧಾಕರ್ ಶಾಂತಿ , ಓಂ ಪ್ರಕಾಶ್ , ಟ್ರಸ್ಟಿಗಳು ಆಡಳಿತ ಮಂಡಳಿಯ ಸದಸ್ಯರು , ಸೇವಾ ಸಮಿತಿಯ ಸದಸ್ಯರು ಉಪಸ್ಥರಿದ್ದರು , ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಮಂದಿರಕ್ಕೆ ಭೇಟಿನೀಡಿದರು ಮಂದಿರದ ವತಿಯಿಂದ ಶ್ರೀದೇವರ ಪ್ರಸಾದ ದೊಂದಿಗೆ ಗೌರವಿಸಲಾಯಿತು , ಹರ್ಷ ಬಳಗದವರಿಂದ ಭಜನಾ ಕಾರ್ಯಕ್ರಮ ಆರಂಭ ಗೊಂಡು ನಿರಂತರ ಭಜನೆ ನೆಡೆಯಿತು , ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾವಿರಾರರು ಭಕ್ತರೊ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು .

