ಕಾರ್ಕಳ : ಜುಲೈ 19ರಂದು 25 ಕೃತಿಗಳ ಅನಾವರಣ

0
7

ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಆಯೋಜಿಸಿರುವ ಕ್ರಿಯೇಟಿವ್ ಪುಸ್ತಕಧಾರೆ ಮೂರು ಕಾರ್ಯಕ್ರಮ ಗಳು ಜುಲೈ 19ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದ್ದು ವಿವಿಧ ಲೇಖಕರ 25 ಕನ್ನಡ ಕೃತಿಗಳು ಲೋಕಾರ್ಪಣೆ ಗೊಳ್ಳಲಿದೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರ ಒಬ್ಬರಾದ ಅಶ್ವಥ್ ಎಸ್ ಎಲ್ ತಿಳಿಸಿದರು.

ಕಾರ್ಕಳದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಕ್ರಿಯೇಟಿವ್ ಪುಸ್ತಕ ಮನೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳ ಪ್ರಕಟಣೆ ಹಾಗೂ ನಾಡಿನ ಸಾಹಿತಿಗಳು ಬರಹಗಾರರು ಚಿಂತಕರು ಮತ್ತು ಸಾಹಿತ್ಯ ಆಸಕ್ತರು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯ ನಡೆಸಿಕೊಂಡು ಬಂದಿದೆ
ಅದರ ಮುಂದುವರಿದ ಭಾಗವಾಗಿ ಈ ವರ್ಷದ ಮೂರನೇ ಆವೃತ್ತಿಯ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪತ್ರಕರ್ತರಾದ ಅಜಿತ್ ಅನು ಮಕ್ಕನವರ್ ಅತಿಥಿಯಾಗಿ ಭಾಗವಹಿಸಲಿದ್ದು ಶಿಕ್ಷಣ ತಜ್ಞ ಡಾಕ್ಟರ್ ಮಹಾ ಬಲೇಶ್ವರ ರಾವ್ ಮಂಗಳೂರು ವಿ ವಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬಳೆ ಸೇರಿದಂತೆ ರಾಜ್ಯದ ಹಿರಿಯ ಅನೇಕ ಸಾಹಿತಿ ಗಳು ಹಾಗೂ ಬರಹಗಾರರು ಸಾಹಿತ್ಯ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಹೊಸ ಪಟ್ಟಣ ಖ್ಯಾತ ಶಿಕ್ಷಣ ಸಿದ್ದಾಂತಗಳು ಪಿಯುಶಾಮ್ರತಾ ಸುಭಾಷಿತ ಸಾಗರ ಬದುಕಿನ ಕನ್ನಡಿಯಲ್ಲಿ ಭಾವ ಮುದ್ರೆ ದೇವಯಾನ ತರ್ಕಕ್ಕೆ ನಿಲುಕದ್ದು ಸಮುದ್ರ ಮಾತನಾತು, ನಿತ್ಯದ ನೋಟಗಳಿಗೆ ನಿರುತರ,ಅಪ್ಪನ ಅಂಗಡಿ,ಚಿಗುರು ಚಿವುಟಿದ ಫೇಸ್ಬುಕ್ ಗೆಲುವಿನ ದಾರಿ ನದಿ ಯ oಚಿನ ನಡಿಗೆ ಜನ ಜಂದವನ ಕಡಿದು ತೊಡೆದು ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು ಮೌನ ಈ ಮಳೆಬಿಲ್ಲು ನಂಬಿಕೆ ಗೆಲುವಿನ ಏಣಿ ಅಂತರಂಗ ಯಾನ ಮೌಲ್ಯ ದರಿವಿನ ಹೊಂಬೆಳಕು ನೀಲಿ ಒಲವೇ ಹಾಡಾಗಿದೆ ಸಾಹಿತ್ಯ ವಿಸ್ಮಯ ಹಾಗೂ ರಣರಂಗ ಸೇರಿದಂತೆ ಒಟ್ಟು 25 ಪುಸ್ತಕಗಳು ಬಿಡುಗಡೆಯಾಗಲಿವೆ ಎಂದು ಹೇಳಿದರು.

ರಾಜ್ಯಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿ ಅವರ ನದಿ ದಾಟಿ ಬಂದವರು ಕೃತಿಗೆ ಪ್ರಧಾನ ಮಾಡಲಾಗುವುದು ಎಂದು ಹೇಳಿದರು. ಕಾದಂಬರಿಕಾರ ಅನುಬೆಳ್ಳೆ ಪ್ರಮುಖರಾದ ಚಂದ್ರಕಾಂತ, ನವೀನ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.