ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ; ಗ್ರಾಮೀಣ ಪ್ರತಿಭೆಗೆ ಅಖಿಲ ಭಾರತ ರ‍್ಯಾಂಕ್
ಕುಂದಾಪುರ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶದಲ್ಲಿ ಕುಂದಾಪುರದ ಸುಜ್ಞಾನ ಪಿಯು ಕಾಲೇಜು ತನ್ನ ಮೊದಲ ಬ್ಯಾಚ್‌ನಲ್ಲೇ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಕೇವಲ ಎಂಟು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡಿದ್ದ ಕಾಲೇಜು, ತನ್ನ ಮೊದಲ ಪ್ರಯತ್ನದಲ್ಲೇ ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕಿನ ಪಿಯು ಕಾಲೇಜುಗಳಲ್ಲಿ ಅಗ್ರ ಫಲಿತಾಂಶ ದಾಖಲಿಸಿದೆ.
ಕಾಲೇಜಿನ ವಿದ್ಯಾರ್ಥಿ ಸಮ್ಮೇದ ಪಾರೀಸ ಬೋಜ ಅವರು 720ಕ್ಕೆ 579 ಅಂಕಗಳನ್ನು ಗಳಿಸಿ ಅಖಿಲ ಭಾರತ ರ‍್ಯಾಂಕ್ (AIR) 2135 ಪಡೆದು ಕಾಲೇಜಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಅವರು ಎಸ್‌ಎಸ್‌ಎಲ್‌ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ್ದು, ಭಾಷೆ ಅಥವಾ ಗ್ರಾಮೀಣ ಪರಿಸರ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ.
ಈ ಬಾರಿ ಕಾಲೇಜಿನಿಂದ 22 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 17 ವಿದ್ಯಾರ್ಥಿಗಳು ನೀಟ್ ಅರ್ಹತೆ (Qualify) ಪಡೆದಿದ್ದಾರೆ. ಇವರ ಪೈಕಿ ಐವರು ಸರ್ಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಪ್ರವೇಶ ಪಡೆಯುವ ಅರ್ಹತೆ ಗಳಿಸಿದ್ದಾರೆ.
ಪ್ರಮುಖ ಸಾಧಕರು:
- ಸಮ್ಮೇದ ಪಾರೀಸ ಬೋಜ – 579/720 (AIR 2135)
- ಇಂಚರಾ ಎಸ್. ಪೂಜಾರಿ – 537/720 (AIR 23941)
- ಧನುಷ್ ದೇವಾಡಿಗ – 513/720 (AIR 36395)
- ಸುಶ್ಮಿತಾ ಪ್ರವೀಣ್ ಕುಮಾರ್ ಸುಕಾಲಿ – 451/720
- ಜಯರಾಜ್ ಜೆ.ಎಸ್. – 431/720
ಇದರ ಜೊತೆಗೆ ರಮ್ಯಶ್ರೀ ಸಿದ್ದಪ್ಪ ಅಣಜಿ, ಲಕ್ಷ್ಮಿ ಅವಣ್ಣ ವಡೇರ್, ರಿತೇಶ್ ಎಂ.ಎಸ್., ಕೌಶಿಕ್ ಶೆಟ್ಟಿ, ಸೋಹಮ್ ಮಹಾದೇವ ಯಲಿಗಾರ, ಶೀತಲ್ ಕುಮಾರ್ ಶೆಟ್ಟಿ, ಸೃಷ್ಠಿ ಶಿವಾಜಿ ನಲವಾಡೆ, ವಿನಯ್ ಗಡ್ಡಿ, ಸೋಮನ್ ಗೌಡ, ಪೃಥ್ವಿ ನಾಗಪ್ಪ ರಾಮಣ್ಣವರ್, ಭರತ್ ಕುಮಾರ್ ನಾಯ್ಕ್, ವಿನಯ್ ಸುಕುಮಾರ್ ದಿಬ್ಬದ್, ರಕ್ಷಿತ ರಂಗಪ್ಪ ದಾಸರ್, ದರ್ಶನ್ ಪವಾರ್, ಪ್ರದೀಪ್ ಬಸವಣ್ಣೆಪ್ಪ ಚಲ್ಕೊಪ್ಪ, ತನು ಎಸ್. ಹಾಗೂ ಅಲಿಝಾ ಕರಮತ್ತುಲ್ಲಾ ಸೇರಿದಂತೆ ಹಲವು ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅರ್ಹತೆ ಗಳಿಸಿದ್ದಾರೆ.
ಈ ಐತಿಹಾಸಿಕ ಸಾಧನೆಗಾಗಿ ವಿದ್ಯಾರ್ಥಿಗಳನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸಮರ್ಪಕ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಉಪನ್ಯಾಸಕ ವೃಂದದ ಸೇವೆಯನ್ನು ಆಡಳಿತ ಮಂಡಳಿ ಶ್ಲಾಘಿಸಿದೆ.

