ರೇಡಿಯೊ ಮಣಿಪಾಲದಲ್ಲಿ ‘ಗ್ರಾಹಕ ಜಾಗೃತಿ’ ಸರಣಿಯ- 3ನೇ ಸಂಚಿಕೆ ಪ್ರಸಾರ

0
9

ಮಣಿಪಾಲ್ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 Mhz ಸಮುದಾಯ ಬಾನುಲಿ ಅರ್ಪಿಸುತ್ತಿದೆ ಗ್ರಾಹಕ ಜಾಗೃತಿ ಸರಣಿ ಕಾರ್ಯಕ್ರಮ. ಈ ಸರಣಿಯ 3 ನೇ ಸಂಚಿಕೆ ಜುಲೈ ತಿಂಗಳ ದಿನಾಂಕ 16 ರಂದು ಗುರುವಾರ ಸಂಜೆ 4.10ಕ್ಕೆ ಪ್ರಸಾರವಾಗಲಿದೆ. ಇಂದಿನ ಸಂಚಿಕೆಯಲ್ಲಿ ಬಳಕೆದಾರರ ವೇದಿಕೆ ಉಡುಪಿ ಇದರ ಹಿರಿಯ ವಿಶ್ವಸ್ಥ ರಾಗಿರುವ ಪ್ರೊ.ಲಕ್ಷ್ಮೀ ಬಾಯಿ ಮಾಹಿತಿ ನೀಡಲಿದ್ದಾರೆ.

ಜುಲೈ 17 ರಂದು ಮಧ್ಯಾಹ್ನ 12.10ಕ್ಕೆ ಇದರ ಮರುಪ್ರಸಾರವಿರುವುದು.ರೇಡಿಯೊ ಮಾತ್ರವಲ್ಲದೆ ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal
ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು
ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.