ಹಿಂದೂ ಯುವ ಸೇನೆಯ ಮಾಜಿ ಮುಖಂಡ ರಘು ಶೆಟ್ಟಿ ಪಣಕಜೆ ನಿಧನ

0
3


ಸುರತ್ಕಲ್: ಹಿಂದೂ ಯುವ ಸೇನೆಯ ಮಾಜಿ ಮುಖಂಡರಾಗಿದ್ದ ರಘು ಶೆಟ್ಟಿ ಪಣಕಜೆ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಅವರಿಗೆ ಅಪಾರ ಬಂಧುಬಳಗ ಹಾಗೂ ಸ್ನೇಹಿತರ ಬಳಗವಿದೆ.
90ರ ದಶಕದಲ್ಲಿ ಹಿಂದೂ ಯುವ ಸೇನೆಯ ಮೂಲಕ ಸುರತ್ಕಲ್ ಭಾಗದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರಘು ಶೆಟ್ಟಿ ಅವರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಸಂಘಟನಾ ಚಟುವಟಿಕೆಗಳ ಜೊತೆಗೆ ಸ್ಥಳೀಯವಾಗಿ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಸಮಾಜಸೇವೆಯಲ್ಲಿಯೂ ಸಕ್ರಿಯರಾಗಿದ್ದರು.
ಸುರತ್ಕಲ್ ಭಾಗದಲ್ಲಿ ಬೊಂಡ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದ ಅವರು, ಸ್ಥಳೀಯವಾಗಿ ‘ಸಿಟಿಲಂಚ್ ರಘು’ ಎಂದೇ ಪರಿಚಿತರಾಗಿದ್ದರು. ಪಣಕಜೆ ಸಮೀಪ ಗೂಡಂಗಡಿಯನ್ನೂ ನಡೆಸುತ್ತಿದ್ದರು.
ಮೂಲತಃ ಪಣಕಜೆ ಸಮೀಪದ ಮುಂಡಾಡಿಯಲ್ಲಿ ವಾಸವಾಗಿದ್ದ ಅವರು, ಇಂದು ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಸ್ಥಳೀಯರು ಹಾಗೂ ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.