ಮಂಗಳೂರು : ಜುಲೈ 19ರಂದು ಕಡಲ್ ಸ್ಟುಡಿಯೋಸ್ ಹಾಗೂ ಮಾಯಿಲು ಫಿಲ್ಮ್ಸ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್ (ರಿ.) ಸಹಯೋಗದಲ್ಲಿ ‘ಕಂಗುಲು ಕರ್ಣ್ಗೊಲು – Two Streams From The Same Spring’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕ ಬಚ್ಚಿರೆ’ ತುಳು ಕಿರುಕಥೆಗಳ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಮಂಗಳೂರಿನ ನಂತೂರುದಲ್ಲಿರುವ ಸಂದೇಶ ಫೌಂಡೇಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9.30 ಗಂಟೆಗೆ ‘ಕುದ್ಕ ಬಚ್ಚಿರೆ’ ತುಳು ಕಿರುಕಥೆಗಳ ಸಂಕಲನ ಬಿಡುಗಡೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ನಂತರ 10.00 ಗಂಟೆಗೆ 108 ನಿಮಿಷಗಳ ಅವಧಿಯ ‘ಕಂಗುಲು ಕರ್ಣ್ಗೊಲು’ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಈ ಸಾಕ್ಷ್ಯಚಿತ್ರವು ತುಳು ಮತ್ತು ಕನ್ನಡ ಭಾಷೆಗಳಲ್ಲಿ ನಿರ್ಮಾಣಗೊಂಡಿದೆ.
ಕಾರ್ಯಕ್ರಮದಲ್ಲಿ ಸಂದೇಶ ಫೌಂಡೇಶನ್ ನಿರ್ದೇಶಕ ಫಾ. ರೋಶನ್ ರೊಸಾರಿಯೋ, ಜಾನಪದ ಮತ್ತು ರಂಗಕಲಾವಿದೆ ಶೀನಾ ನಡೋಳಿ, ಸಂದೇಶ ಫೌಂಡೇಶನ್ ಟ್ರಸ್ಟಿ ರಾಯ್ ಕ್ಯಾಸ್ಟೆಲಿನೊ ಹಾಗೂ ತುಳು ಸಾಹಿತ್ಯಗಾರ್ತಿ ಅತ್ರಾಡಿ ಅಮೃತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ತುಳು ಸಾಹಿತ್ಯ, ಸಂಸ್ಕೃತಿ ಹಾಗೂ ಸಾಕ್ಷ್ಯಚಿತ್ರಗಳಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7795529458, 8073319019, 9632900719.

