ಆತ್ರಾಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ ( SPYSS ) ಉಡುಪಿ ಜಿಲ್ಲಾ ಶ್ರೀ ವಿವೇಕಾನಂದ ಯೋಗ ಆತ್ರಾಡಿ ಶಾಖೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಆರಂಭದಲ್ಲಿ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಒಂದು ಗಂಟೆಗಳ ಕಾಲ ನಿರಂತರ ಯೋಗ ಕಾರ್ಯಕ್ರಮ ನಡೆಯಿತು.
ಯೋಗ ಬಂಧು ಶ್ರೀ ಅಶೋಕ್ ಕಾಂಚನ್ ರವರು ಆಟಿಯ ಆಚರಣೆಯ ಮಹತ್ವ ಮತ್ತು ಅಂದಿನ ಖಾದ್ಯಗಳ ಬಗ್ಗೆ ವಿಚಾರವನ್ನು ತಿಳಿಸಿದರು. ಯೋಗ ಶಾಖೆಯ ಹಿರಿಯರಾದ ಶ್ರೀ ರಾಮನಾಥ್ ನಾಯಕ್ ರವರು ಆಟಿಯ ಹಿಂದಿನ ಕಾಲದ ಕಷ್ಟದ ದಿನಗಳನ್ನು ನೆನಪಿಸಿದರು.
ಮುಖ್ಯ ಅತಿಥಿ ಮತ್ತು ಮಾಜಿ ಪಂಚಾಯತ್ ಸದಸ್ಯರಾದ ಶ್ರೀ ಸದಾಶಿವ ನಾಯಕ್ ರವಾರು ಮಾತನಾಡುತ್ತ ಆಟಿಯ ತಿಂಗಳು ಹಳ್ಳಿಯಲ್ಲಿ ಲಭ್ಯವಿರುವ ಔಷದಿಯ ಗುಣವಿರುವ ಹಲವು ಖಾದ್ಯಗಳ ಬಗ್ಗೆ ಮತ್ತು ಅವುಗಳ ರುಚಿಯ ಬಗ್ಗೆ ವಿವರಗಳನ್ನು ನೀಡಿದರು. ಇಂದಿಗೂ ಹಳ್ಳಿ ಗಳಲ್ಲಿ ಕೆಲ ಮನೆಗಳಲ್ಲಿ ಅದರ ಉಪಯೋಗ ಮಾಡುತ್ತಿರುವ ಬಗ್ಗೆ ಪ್ರಶಂಸೆ ಮಾಡಿದರು.
ಪ್ರತಿಯೊಬ್ಬ ಯೋಗ ಬಂಧುಗಳು ತಮ್ಮ ತಮ್ಮ ಮನೆಯಿಂದ ತಂದಿರುವ ಖಾದ್ಯಗಳ ತಯಾರಿಕೆ ಬಗ್ಗೆ ವಿವರಗಳನ್ನು ತಿಳಿಸಿದರು. ಕೊನೆಯಲ್ಲಿ ಎಲ್ಲಾ ತಮ್ಮ ಮನೆಗಳಿಂದ ತಂದಿರುವ ಆಟಿಯ ವಿಶೇಷ ತಿಂಡಿ ತಿನಿಸುಗಳನ್ನು ಪರಸ್ಪರ ಹಂಚಿ ಸವಿಯನ್ನುoಡರು.

