ಸಜೀಪ ದಸರಾ–2026 ಪೂರ್ವಭಾವಿ ಸಭೆ; ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಷೆ ಸಿದ್ಧ

0
61

ಸಜೀಪ ಮೂಡ ಸುಭಾಷ್ ನಗರಶ್ರೀ ಶಾರದಾ ಪೂಜಾ ಸಮಿತಿ ಮತ್ತು ಸುಭಾಷ್ ಯುವಕಮಂಡಲ ಸಜೀಪಮೂಡ ಇದರ ಆಶ್ರಯದಲ್ಲಿ ಶಾರದಾ ಪೂಜೆ ಮಹೋತ್ಸವ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 17ರಿಂದ 22ರ ತನಕ ಆರು ದಿನಗಳ ವಿಜೃಂಭಣೆಯ ಅದ್ದೂರಿ ಸಜೀಪ ದಸರಾ2026 ನಡೆಸುವ ಬಗ್ಗೆ ಪೂರ್ವಭಾವಿ ಸಿದ್ಧತಾ ಸಭೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಪೂ0ಜ ಅಧ್ಯಕ್ಷತೆಯಲ್ಲಿ ರವಿವಾರದಂದು ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಯುವಕ ಮಂಡಲದ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ಶತಮಾನೋತ್ಸವ ಸಮಿತಿ ದುಬಾಯಿ ಸಂಚಾಲಕ ರೊನಾಲ್ಡ್ ಮಾರ್ಟಿಸ್, ಈಶ್ವರ ಮಂಗಳ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಮಹಿಳಾ ಸಮಿತಿ ಅಧ್ಯಕ್ಷ ಪುಷ್ಪ ರಮೇಶ್ ಮೊದಲಾದವರು ಉಪಸ್ಥಿತರಿದ್ದರು ಶತಮಾನೋತ್ಸವದ ಅಂಗವಾಗಿ ಆರು ದಿನಗಳ ಧಾರ್ಮಿಕ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ಅನ್ನದಾನ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಕಾರ್ಯಕ್ರಮ ಪ್ರತಿದಿನ ಭಜನಾ ಕಾರ್ಯಕ್ರಮ ಬಗ್ಗೆ ರೂಪುರೇಷೆ ಸಿದ್ದಪಡಿಸಲಾಯಿತು