ಸಮಾಜದ ಋಣ ತೀರಿಸಲು ಸಮಾಜಮುಖಿಯಾಗಿ ಕೆಲಸ ಮಾಡಬೇಕಾಗಿದೆ: ದಯಾನಂದ ಪೈ

0
13

ಮೂಡುಬಿದಿರಿ –ಇಲ್ಲಿನ ಅಚ್ಚರಕಟ್ಟೆ ಪಡುಮಾರ್ನಾಡಿನಲ್ಲಿ ಜರುಗಿದ ಶ್ರೀ ಸುಮುಖ ಭಜನಾ ಮಂಡಳಿಯ ವಿದ್ಯಾರ್ಥಿ ಮಕ್ಕಳಿಗೆ, ಪದಾಧಿಕಾರಿಗಳಿಗೆ ಮತ್ತು ಪೋಷಕರಿಗೆ ಛತ್ರಿ ವಿತರಣಾ ಕಾರ್ಯಕ್ರಮ ಮತ್ತು ತಬಲಾ ವಾದನ ಹಸ್ತಾಂತರ ಕಾರ್ಯಕ್ರಮವು ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಆಧ್ಯಕ್ಷರೂ ಭಜನಾ ಮಂಡಳಿಯ ಗೌರವಾಧ್ಯಕ್ಷರೂ ಆದ ಎಂ ದಯಾನಂದ ಪೈ ಯವರ ಅಧ್ಯಕ್ಷತೆಯಲ್ಲಿ ಜರುಗಿತು.ಅವರು ಕೊಡುಗೆಯಾಗಿ ನೀಡಿದ ಛತ್ರಿಗಳನ್ನು ವಿತರಿಸಿ ಮಾತನಾಡುತ್ತಾ ಸಮಾಜದಿಂದ ನಾವು ನಾನಾ ವಿಧದ ರೂಪದಲ್ಲಿ ಉಪಕಾರವನ್ನು ಪಡೆಯುತ್ತಿದ್ದೇವೆ.ಹೀಗೆ ಸಮಾಜದ ಋಣ ನಮ್ಮ ಮೇಲಿರುವುದರಿಂದ ಸಮಾಜ ಮುಖಿಯಾಗಿ ನಾವು ಕೆಲಸಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.


ಶಾಲೆಯಲ್ಲಿ ಅಧ್ಯಯನದ ಜೊತೆಗೆ ಹೊರ ಪ್ರಪಂಚದಲ್ಲಿ ಭಾರತೀಯ ಸನಾತನ ಸಂಸ್ಕೃತಿಯ ಕುಣಿತ ಭಜನೆಯನ್ನು ಪ್ರೋತ್ಸಾಹಿಸುತ್ತಿರುವ ಮಕ್ಕಳ ಪೋಷಕರನ್ನು, ತರಭೇತಿದಾರ ದಯಾನಂದ ಪೈಗಳು ಅಭಿನಂದಿಸಿದರು.
ಭಜನಾ ಮಂಡಳಿಯ ಅಧ್ಯಕ್ಷೆ ಉಮಾವತಿ ಬಿ ಬಂಗೇರರವರು ಕೊಡುಗೆಯಾ ನೀಡಿದ ತಬಲಾ ವಾದನವನ್ನು ಈ ಸಂದರ್ಭದಲ್ಲಿ ಮಕ್ಕಳಿಗೆ ವಿತರಿಸಲಾಯ್ತು.ಮಂಡಳಿಯ ಉಪಾಧ್ಯಕ್ಷ ಸುಂದರ ಪೂಜಾರಿ, ಕಾರ್ಯದರ್ಶಿ ಕೃಷ್ಣಪ್ಪ ಪೆರ್ನಾಡ್ಕ, ಗೌರವ ಸಲಹೆಗಾರ ಪ್ರಮೋದ್ ಪೆರ್ನಡ್ಕ , ಭಜನಾ ಪರಿಷತ್ ಬೆಳುವಾಯಿ ವಲಯದ ಅಧ್ಯಕ್ಷ ಸದಾನಂದ ಕುಲಾಲ್, ಭಜನಾ ತರಬೇತುದಾರರು ಲಕ್ಷ್ಮಣ್ ನಾಯ್ಕ್ ಮತ್ತು ಪ್ರವೀಣ್ ಸಾಲ್ಯಾನ್, ಖಜಾಂಚಿಗಳಾದ ಸುಪ್ರಿಯಾ ಮತ್ತು ಸ್ಮಿತಾ, ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್, ಸೌಮ್ಯ ,ಚೆಲುವಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ರವಿ ಮೂಲ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ಸೌಮ್ಯ ವಂದಿಸಿದರು.