ಹೆಬ್ರಿ ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ “ಆಟಿ ತಿಂಗಳ ವೈಭವ”

0
61


“ವಿಶೇಷ ಖಾದ್ಯಗಳ ಅಮೃತಾನುಭವ” ಕಾರ್ಯಕ್ರಮವು ಹೆಬ್ರಿ ಅಮೃತ ಭಾರತಿ ವಿದ್ಯಾ ಕೇಂದ್ರದ, ಅನ್ನಪೂರ್ಣ ಸಭಾಂಗಣದಲ್ಲಿ ದಿನಾಂಕ 20.07.2026 ರಂದು ನಡೆಯಿತು ಆರರಿಂದ ಹತ್ತನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅವರ ಪೋಷಕರ ಸಹಾಯದಿಂದ ಆಟಿ ತಿಂಗಳ ನಾನಾ ರೀತಿಯ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ ಶಾಲೆಗೆ ತಂದು ಸಂಭ್ರಮದಿಂದ ಹಂಚಿ ಖುಷಿ ಪಟ್ಟರು.

ವಿದ್ಯಾರ್ಥಿಗಳ ಈ ಸಡಗರದಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಗುರುದಾಸ್ ಶೆಣೈ, ಪಾಂಡುರಂಗ ರಮಣ ನಾಯಕ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ, ಶ್ರೀಯುತ ರಾಜೇಶ್ ನಾಯಕ್ ,ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ಶೈಲೇಶ್ ಕಿಣಿ, ಟ್ರಸ್ಟ್ ನ ಹಿರಿಯರಾದ ಬಾಲಕೃಷ್ಣ ಮಲ್ಯರು, ಟ್ರಸ್ಟ್ ಸದಸ್ಯರಾದ ವಿಷ್ಣುಮೂರ್ತಿ ನಾಯಕ್ , ವಸತಿ ನಿಲಯದ ಕಮಿಟಿಯ ಸದಸ್ಯರಾದ ರಾಮಕೃಷ್ಣ ಆಚಾರ್ ಖಾದ್ಯಗಳನ್ನು ಸವಿದು ,ವಿದ್ಯಾರ್ಥಿಗಳ ಕೈ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂರು ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ ರವರು ಉಪಸ್ಥಿತರಿದ್ದರು.