ವೃದ್ಧನಿಗೆ ಡಿಜಿಟಲ್​ ಅರೆಸ್ಟ್​ ಬೆದರಿಕೆ: 9 ಲಕ್ಷ ರೂ. ವಂಚನೆ

0
19


ಉಡುಪಿ: ಡಿಜಿಟಲ್​ ಅರೆಸ್ಟ್​ ಹೆಸರಿನಲ್ಲಿ ವೃದ್ಧರೊಬ್ಬರನ್ನು ಹೆದರಿಸಿ ಲಕ್ಷಾಂತರ ರೂ. ದೋಚಿರುವ ಸೈಬರ್​ ವಂಚನೆ ಪ್ರಕರಣ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.
ವಾಸುದೇವ ಪ್ರಭು (76) ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್​ಪ್​ ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಮತ್ತೊಂದು ಬ್ಯಾಂಕ್​ ಖಾತೆ ತೆರೆಯಲಾಗಿದ್ದು, ಅದರಲ್ಲಿ 2 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ನಡೆದಿದೆ. ಈ ಬಗ್ಗೆ ನಿಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಸಾಯಂಕಾಲದೊಳಗೆ ನಿಮ್ಮನ್ನು ಡಿಜಿಟಲ್​ ಅರೆಸ್ಟ್​ ಮಾಡಲಾಗುವುದು. ಬಳಿಕ ಮುಂಬೈಗೆ ಕರೆದೊಯ್ದು 45 ದಿನಗಳ ಕಾಲ ಪೊಲೀಸ್​ ಕಸ್ಟಡಿಯಲ್ಲಿ ಇಡಲಾಗುವುದು ಎಂದು ಹೆದರಿಸಿದ್ದ. ಇದರಿಂದ ತೀವ್ರ ಆತಂಕಕ್ಕೊಳಗಾದ ವಾಸುದೇವ ಪ್ರಭು ಅವರು ವಂಚಕರು ನೀಡಿದ ಅಪರಿಚಿತ ಬ್ಯಾಂಕ್​ ಖಾತೆಗೆ ಹಂತ ಹಂತವಾಗಿ ಒಟ್ಟು 9,29,000 ರೂ. ಹಣ ವರ್ಗಾವಣೆ ಮಾಡಿದ್ದಾರೆ. ತದನಂತರ ತಾನು ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.