ಬೆಂಗಳೂರು: ನಗರದ ರಾಮಕೃಷ್ಣ ಮಠ ಬಡಾವಣೆಯ ಕೆಂಪೇಗೌಡ ನಗರ ಬೆಂಗಳೂರಿನಲ್ಲಿ ನಡೆದ ಮೈತ್ರಿ ಕಲಾ ತಂಡದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜ್ಞಾನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈತ್ರಿ ಕಲಾ ತಂಡದ ಅಧ್ಯಕ್ಷೆ ವನಜಾ ಹಾಗೂ ತೇಜಸ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜ್ಞಾನ ಚೈತನ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಅನಿಲ್ ಕುಮಾರ್ ಕೆ.ವಿ, ನಿರ್ದೇಶಕರಾದ ನವೀನ್ ಕುಮಾರ್, ಕೆ.ಆರ್.ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ. ರಾಜಶೇಖರ್, ಕನ್ನಡ ಶಿಕ್ಷಕರು, ಸಮಾಜ ಸೇವಕರಾದ ಡಾ. ಶ್ರೀನಿವಾಸ್ ಗೌಡ ಎಚ್, ರಂಗಭೂಮಿ ಕಲಾವಿದ ಪರಶುರಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

