~ ಸ್ಮಾರ್ಟ್, ಸುರಕ್ಷಿತ ಮತ್ತು ಪರಿಸರ-ಸ್ನೇಹಿ ಎಂಎಫ್‌ಪಿ (MFP) – ಆಧುನಿಕ ಕಚೇರಿಯ ಪ್ರಬಲ ಸಾಧನ ~
~ ಸ್ಮಾರ್ಟ್ ಕಾರ್ಯವೈಖರಿಗೂ ಮೀರಿದ್ದು – ತಡೆರಹಿತ ಕ್ಲೌಡ್ ಸಂಯೋಜನೆ ಮತ್ತು ಸುಧಾರಿತ ಭದ್ರತೆಯ ಮೂಲಕ ವೈವಿಧ್ಯಮಯ ಕೆಲಸದ ಶೈಲಿಗಳ ಸಬಲೀಕರಣ ~
ಜುಲೈ 20, 2026 : ಶಾರ್ಪ್ ಬ್ಯುಸಿನೆಸ್ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಇಂದು ಭಾರತದಾದ್ಯಂತ ತನ್ನ ನೂತನ ಡಿಜಿಟಲ್ ಫುಲ್-ಕಲರ್ ಮತ್ತು ಮೊನೊ (ಕಪ್ಪು-ಬಿಳುಪು) ಮಲ್ಟಿಫಂಕ್ಷನಲ್ ಪ್ರಿಂಟರ್‌ಗಳಾದ (MFP) BP-71, BP-51, BP-71M ಮತ್ತು BP-51M ಸರಣಿಗಳನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿದೆ.
ಕೆಲಸದ ಶೈಲಿಗಳು ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ತಡೆರಹಿತ ಸಂಪರ್ಕವು ಅತ್ಯಗತ್ಯವಾಗಿದೆ. ಬಳಕೆದಾರರ ಆಲೋಚನೆಗಳನ್ನು ಒಗ್ಗೂಡಿಸುವುದು, ಬಲವಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಸುಸ್ಥಿರ ಭವಿಷ್ಯವನ್ನು ಬೆಂಬಲಿಸುವ ಜೊತೆಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಹೆಚ್ಚಿನ ದಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಹೊಸ ಪ್ರಿಂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಶಾರ್ಪ್ ತನ್ನ ‘ಅಡ್ವಾನ್ಸ್ಡ್’ ಮತ್ತು ‘ಎಸೆನ್ಶಿಯಲ್’ ಸರಣಿಯ ಮೂಲಕ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಿದೆ. ಕಲರ್ (ಬಣ್ಣದ) ವಿಭಾಗದಲ್ಲಿ BP-71C65/C45 ಮತ್ತು ಮೊನೊ ವಿಭಾಗದಲ್ಲಿ BP-71M55/M65 ಮಾದರಿಗಳು ಅಡ್ವಾನ್ಸ್ಡ್ ಸರಣಿಯಲ್ಲಿ ಸೇರಿವೆ. ಅದೇ ರೀತಿ, ಎಸೆನ್ಶಿಯಲ್ ಸರಣಿಯು BP-51C55/C45/C36/C31T/C26T (ಕಲರ್) ಮತ್ತು BP-51M45T/65T (ಮೊನೊ) ಮಾದರಿಗಳನ್ನು ಒಳಗೊಂಡಿದೆ. ಅತ್ಯುತ್ತಮ ಬಳಕೆದಾರ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಈ ಹೊಸ MFP ಗಳು, ಸ್ಮಾರ್ಟ್ ಸ್ಕ್ಯಾನಿಂಗ್, ಮತ್ತು ಹೈ-ಸ್ಪೀಡ್ ಕಾಪಿ, ಪ್ರಿಂಟ್, ಸ್ಕ್ಯಾನ್ ಸೌಲಭ್ಯಗಳನ್ನು ಹೊಂದಿವೆ. ಇವುಗಳು ನಿಮಿಷಕ್ಕೆ 26 ರಿಂದ 65 ಪುಟಗಳ (ppm) ವೇಗ ಹಾಗೂ SRA3 ವರೆಗಿನ ಕಾಗದದ ಗಾತ್ರವನ್ನು ಬೆಂಬಲಿಸುವ ಮೂಲಕ ಕಚೇರಿಯ ದಕ್ಷತೆಯನ್ನು ಹೆಚ್ಚಿಸುತ್ತವೆ.
ಹೊಸ BP-71C, BP-51C, BP-71M ಮತ್ತು BP-51M ಸರಣಿಗಳು ಎನಿಟೈಮ್, ಎನಿವೇರ್ (ಯಾವುದೇ ಸಮಯದಲ್ಲಿ, ಎಲ್ಲಿಯಾದರೂ) ಕಲ್ಪನೆಯೊಂದಿಗೆ ಜನರ ಐಡಿಯಾಗಳು ಮತ್ತು ಕೆಲಸಗಳನ್ನು ಬೆಸೆಯುವ ಮೂಲಕ ಕಚೇರಿ ಸಂವಹನವನ್ನು ಮರು-ವ್ಯಾಖ್ಯಾನಿಸುತ್ತವೆ. ಕೃತಕ ಬುದ್ಧಿಮತ್ತೆ (AI), ಪ್ರತಿಯೊಂದು ಪ್ರಿಂಟ್ ಹಾಗೂ ಸ್ಕ್ಯಾನ್‌ಗೆ ಸುಧಾರಿತ ಭದ್ರತೆ ಮತ್ತು ಇಂಟ್ಯೂಟಿವ್ ಶೇರಿಂಗ್ ಪರಿಕರಗಳೊಂದಿಗೆ, ಈ ಸಾಧನಗಳು ತಂತ್ರಜ್ಞಾನದ ತೊಡಕುಗಳಿಲ್ಲದೆ ತಂಡಗಳು ಸುಲಭವಾಗಿ ಒಟ್ಟಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತವೆ.
ಶಿಕ್ಷಣ, ಎಂಜಿನಿಯರಿಂಗ್, ಕನ್ಸಲ್ಟಿಂಗ್, ಆರೋಗ್ಯ, ಹಾಸ್ಪಿಟಾಲಿಟಿ, ಪಬ್ಲಿಷಿಂಗ್, ಕಾರ್ಪೊರೇಟ್, ಉತ್ಪಾದನೆ ಮತ್ತು ಬಿಎಫ್‌ಎಸ್‌ಐ (BFSI) ವಲಯಗಳ ಅಗತ್ಯಗಳನ್ನು ಪೂರೈಸಲು ಇವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಶಾರ್ಪ್ ಬ್ಯುಸಿನೆಸ್ ಸಿಸ್ಟಮ್ಸ್ (ಇಂಡಿಯಾ) ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಒಸಾಮು ನರಿತಾ ಈ ಕುರಿತು ಮಾತನಾಡಿ, “ಯಾವುದೇ ಸಾಧನವು ಸ್ಮಾರ್ಟ್ ಆಗಿರಬಹುದು, ಆದರೆ ಅದು ಬಳಸುವ ಜನರ ದೈನಂದಿನ ಕೆಲಸವನ್ನು ಸುಲಭಗೊಳಿಸದಿದ್ದರೆ ಅದಕ್ಕೆ ಅರ್ಥವಿಲ್ಲ. ನಮ್ಮ ಈ ಹೊಸ ಉತ್ಪನ್ನಗಳು, AI-ಆಧಾರಿತ ಆಟೊಮೇಷನ್‌ನಿಂದ ಹಿಡಿದು ಬಹು-ಹಂತದ ಭದ್ರತೆ ಮತ್ತು ಸುಸ್ಥಿರ ವಿನ್ಯಾಸದವರೆಗೆ ಪ್ರತಿಯೊಂದು ವೈಶಿಷ್ಟ್ಯದಲ್ಲಿಯೂ ಜನರಿಗೆ ನೈಜ ಮೌಲ್ಯವನ್ನು ಒದಗಿಸುತ್ತವೆ. ಇದುವೇ ಸ್ಮಾರ್ಟ್ ತಂತ್ರಜ್ಞಾನ ಮತ್ತು ಮಾನವ ಸಂಪರ್ಕದ ನೈಜ ಬೆಸುಗೆ” ಎಂದರು.
ಏಷ್ಯಾ ಬ್ಯುಸಿನೆಸ್ ಸೊಲ್ಯೂಷನ್ಸ್ ಸೆಂಟರ್‌ನ ಮುಖ್ಯಸ್ಥರಾದ ಶ್ರೀ ಜುನ್ ಕಸಾವಕಿ ಮಾತನಾಡಿ, “ಶಾರ್ಪ್‌ನಲ್ಲಿ ನಾವೀನ್ಯತೆ ಎಂದರೆ ಕೇವಲ ತಂತ್ರಜ್ಞಾನವಲ್ಲ, ಜನರನ್ನು ಸಬಲೀಕರಣಗೊಳಿಸುವುದು ಮತ್ತು ಕೆಲಸದ ಶೈಲಿಯನ್ನು ಮರುವ್ಯಾಖ್ಯಾನಿಸುವುದು. ಈ ಹೊಸ ಸರಣಿಯ ಮೂಲಕ ಸಂಸ್ಥೆಗಳಿಗೆ ತಡೆರಹಿತ ಸಂವಹನ, ಸುರಕ್ಷಿತ ಕಾರ್ಯನಿರ್ವಹಣೆ ಮತ್ತು ಸುಸ್ಥಿರ ಕಾರ್ಯಾಚರಣೆಯ ಸಾಧನಗಳನ್ನು ನಾವು ನೀಡುತ್ತಿದ್ದೇವೆ” ಎಂದರು.
ಸ್ಮಾರ್ಟ್ ವೈಶಿಷ್ಟ್ಯಗಳು ಮತ್ತು AI-ಚಾಲಿತ ಯಾಂತ್ರೀಕರಣದ ಮೂಲಕ ಉತ್ಪಾದಕತೆಯ ಹೆಚ್ಚಳ
• ಇಂಟೆಲಿಜೆಂಟ್ ಆಟೋ ಸೆಟ್ ಸ್ಕ್ಯಾನ್: ಈ ವೈಶಿಷ್ಟ್ಯವು ರೆಸಲ್ಯೂಶನ್, ಓರಿಯಂಟೇಶನ್ ಮತ್ತು ಚಿತ್ರದ ಗುಣಮಟ್ಟವನ್ನು ಸ್ವಯಂಚಾಲಿತವಾಗಿ ಹೊಂದಿಸಿ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.
• ಅದ್ಭುತ ವೇಗ: BP-71C ಮತ್ತು BP-71M ಸರಣಿಗಳು 300-ಶೀಟ್ ಡ್ಯುಪ್ಲೆಕ್ಸ್ ಸಿಂಗಲ್ ಪಾಸ್ ಫೀಡರ್ (DSPF) ನೊಂದಿಗೆ ನಿಮಿಷಕ್ಕೆ 300 ಚಿತ್ರಗಳನ್ನು (ipm) ಸ್ಕ್ಯಾನ್ ಮಾಡುವ ಮೂಲಕ ತಮ್ಮ ವರ್ಗದಲ್ಲಿಯೇ ಅತಿ ವೇಗದ ಸಾಧನೆ ಹೊಂದಿವೆ. BP-51C ಮತ್ತು 51M ಸರಣಿಗಳು 100-ಶೀಟ್ RSPF ಮೂಲಕ 80 ipm ವೇಗವನ್ನು ಒದಗಿಸುತ್ತವೆ.
• ಸುಧಾರಿತ ಪ್ರವೇಶ: ಸುರಕ್ಷಿತ ಪ್ರವೇಶಕ್ಕಾಗಿ ಮೈಕ್ರೋಸಾಫ್ಟ್ ಎಂಟ್ರಾ ಐಡಿ ಮತ್ತು ವೈಯಕ್ತೀಕರಿಸಿದ ಅನುಕೂಲಕ್ಕಾಗಿ ಮೈ ಫೋಲ್ಡರ್ ಪ್ರಿಂಟ್ (My Folder Print) ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಆಧುನಿಕ ಕಚೇರಿಗಾಗಿ ಬಹು-ಹಂತದ ಭದ್ರತೆ
• ನೆಟ್‌ವರ್ಕ್ ಬೆದರಿಕೆಗಳು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಡೇಟಾ ಮತ್ತು ಸಾಧನಗಳೆರಡನ್ನೂ ರಕ್ಷಿಸಲು ಇವುಗಳು ಬಹು-ಹಂತದ ಭದ್ರತೆಯನ್ನು ಒದಗಿಸುತ್ತವೆ.
• BIOS ಮತ್ತು ಫರ್ಮ್‌ವೇರ್ ರಕ್ಷಣೆ: ಸಿಸ್ಟಂ ಮೇಲಿನ ಬೆದರಿಕೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ ಪರಿಹರಿಸುತ್ತದೆ.
• ಬಿಟ್‌ಡಿಫೆಂಡರ್ ಸ್ಕ್ಯಾನ್ ಎಂಜಿನ್: ಐಚ್ಛಿಕವಾಗಿ ಲಭ್ಯವಿರುವ ಈ ಎಂಜಿನ್, ಕನೆಕ್ಟ್ ಆದ ಸಾಧನಗಳಿಗೆ ವೈರಸ್ ಬರದಂತೆ ತಡೆಯುತ್ತದೆ.
• ಡೇಟಾ ಎನ್‌ಕ್ರಿಪ್ಶನ್: ಟೋಕನ್ ಆಧಾರಿತ ಅಥೆಂಟಿಕೇಶನ್, ಡೇಟಾ ಎನ್‌ಕ್ರಿಪ್ಶನ್, ಇಮೇಜ್ ಜಾಬ್ ಲಾಗ್ ಮತ್ತು ಸ್ವಯಂಚಾಲಿತ ಫರ್ಮ್‌ವೇರ್ ಅಪ್‌ಡೇಟ್ ಮೂಲಕ ಪ್ರತಿ ಡಾಕ್ಯುಮೆಂಟ್ ಸುರಕ್ಷಿತವಾಗಿರಿಸುತ್ತದೆ. ಲೀಸ್ ಅವಧಿ ಮುಗಿದ ಮೇಲೂ ಡೇಟಾ ಸೋರಿಕೆಯಾಗದಂತೆ ತಡೆಯಲು ‘ಡೇಟಾ ಎರೇಸ್’ ಫೀಚರ್ ಅನ್ನು ಅಳವಡಿಸಲಾಗಿದೆ.
ಪರಿಸರ ಸುಸ್ಥಿರತೆಗೆ ಆದ್ಯತೆ
• ಮರುಬಳಕೆಯ ಪ್ಲಾಸ್ಟಿಕ್: ಈ ಉತ್ಪನ್ನಗಳನ್ನು 50% ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದ್ದು, ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲಾಗಿದೆ.
• ಪರಿಸರ-ಸ್ನೇಹಿ ಪ್ಯಾಕೇಜಿಂಗ್: ಪಾಲಿಸ್ಟೈರೀನ್ ಬದಲಿಗೆ ಮರುಬಳಕೆ ಮಾಡಬಹುದಾದ ಕಾರ್ಡ್‌ಬೋರ್ಡ್ ಪ್ಯಾಕೇಜಿಂಗ್ ಅನ್ನು ಬಳಸಲಾಗಿದೆ.
• ವಿದ್ಯುತ್ ಉಳಿತಾಯ: ಇವುಗಳು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಕೇವಲ 0.3 W ವಿದ್ಯುತ್ ಬಳಸುತ್ತವೆ ಮತ್ತು ಎನರ್ಜಿ ಸ್ಟಾರ್ (ENERGY STAR®️) ಮಾನದಂಡಗಳನ್ನು ಪೂರೈಸುತ್ತವೆ.
• ಮೋಷನ್ ಸೆನ್ಸಾರ್: BP-71C ಮತ್ತು BP-71M ಸರಣಿಗಳು ಚಲನೆಯ ಸಂವೇದಕವನ್ನು (Motion sensor) ಹೊಂದಿದ್ದು, ಯಾರಾದರೂ ಸಾಧನದ ಹತ್ತಿರ ಬಂದ ತಕ್ಷಣವೇ ಕಾರ್ಯನಿರ್ವಹಿಸಲು ಸಿದ್ಧವಾಗುವ ಮೂಲಕ ವಿದ್ಯುತ್ ಉಳಿತಾಯ ಮಾಡುತ್ತವೆ.
ಶಾರ್ಪ್‌ನ ಈ ಹೊಸ BP-71C, BP-51C, BP-71M ಮತ್ತು BP-51M ಸರಣಿಯ ಪ್ರಿಂಟರ್‌ಗಳು ಭಾರತದಾದ್ಯಂತ ಇರುವ ಶಾರ್ಪ್ ಅಂಗಸಂಸ್ಥೆಗಳು ಮತ್ತು ಅಧಿಕೃತ ವಿತರಕರ ಬಳಿ ಖರೀದಿಗೆ ಲಭ್ಯವಿದೆ.
Home Uncategorized ಶಾರ್ಪ್‌ನಿಂದ ಮುಂದಿನ ಪೀಳಿಗೆಯ A3 ಕಲರ್ ಮತ್ತು ಮೊನೊ ಮಲ್ಟಿಫಂಕ್ಷನಲ್ ಪ್ರಿಂಟರ್‌ಗಳ ಬಿಡುಗಡೆ: ಸ್ಮಾರ್ಟ್ ತಂತ್ರಜ್ಞಾನ...

