ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ಉಡುಪಿ ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಿರಿಯಡ್ಕ ವಲಯದ ಪಂಚನಬೆಟ್ಟು ಕಾರ್ಯಕ್ಷೇತ್ರದಲ್ಲಿ ಬೊಮ್ಮರ ಬೆಟ್ಟು ಗ್ರಾಮ ಪಂಚಾಯಿತಿ ಹಿರಿಯಡ್ಕ ಇಲ್ಲಿ ಹೊಲಿಗೆ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಸಂತೋಷ್ ಜೋಗಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬೊಮ್ಮರ ಬೆಟ್ಟು ಪಂಚಾಯತ್ ಇವರು ನೆರವೇರಿಸಿ ಸ್ವ ಉದ್ಯೋಗಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಮ್ಮಿಕೊಳ್ಳುತ್ತಿದ್ದು ಈ ಭಾಗದ ಸದಸ್ಯರಿಗೆ ಉತ್ತಮ ಅವಕಾಶ ದೊರಕಿದೆ, ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಗಣೇಶ್ ವಲಯ್ಯಾಧ್ಯಕ್ಷರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಇವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಳಿನಾದೇವಿ ಸದಸ್ಯರು ಜನಜಾಗ್ರತಿ ವೇದಿಕೆ ಉಡುಪಿ ಇವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ಮತ್ತು ಆತ್ಮ ವಿಶ್ವಾಸದಿಂದ ಬದುಕುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಮೂರು ತಿಂಗಳ ಕಾಲ ನಡೆಯುವ ಹೊಲಿಗೆ ತರಬೇತಿಯು ಉತ್ತಮವಾಗಿ ನಡೆಯಲಿ, ಇದಕ್ಕೆ ಪೂರಕವಾದ ಹೆಚ್ಚುವರಿ ತರಬೇತಿಗಳನ್ನು ಪಡೆದುಕೊಂಡು ಎಲ್ಲರೂ ಉತ್ತಮ ಟೈಲರ್ಗಳಾಗಿ ಹೊರಹೊಮ್ಮಂತಾಗಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದಮಯಂತಿ ಹೊಲಿಗೆ ಶಿಕ್ಷಕರು ಉಪಸ್ಥಿತರಿದ್ದು ತರಬೇತಿಯ ಬಗ್ಗೆ ಮಾಹಿತಿ ನೀಡಿದರು. ಜಯಲಕ್ಷ್ಮಿ ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೊಮ್ಮರ ಬೆ ಟ್ಟು ಒಕ್ಕೂಟ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪೂರ್ಣಿಮಾ ಜ್ಞಾನ ವಿಕಾಸ ಸಮನ್ವಯಾ ಧಿಕಾರಿ , ಪ್ರಾರ್ಥನೆಯನ್ನು ಜ್ಞಾನದೀಪ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ವಿನೋದ, ಸ್ವಾಗತವನ್ನು ಮೇಲ್ವಿಚಾರಕರಾದ ರಾಜು, ಧನ್ಯವಾದವನ್ನು ಜ್ಞಾನದೀಪ ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ಸುನೀತಾ ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿಯ ಫಲಾನುಭವಿಗಳು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

