ಮೈಸೂರು ಜಿಲ್ಲೆಯ ತಿ. ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆಯ ಒಳಾಂಗಣ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಪುಷ್ಪ ಪ್ರಸಾದ್ ರವರಿಗೆ ಅವರ ಕಲೆ ಹಾಗೂ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಬೆಳಕು ಸೇವಾ ಫೌಂಡೇಶನ್(ರಿ.) ವತಿಯಿಂದ ‘ಬೆಳಕು ಕರ್ನಾಟಕ ಶ್ರೇಷ್ಠತಾ ಸೇವಾ ಪ್ರಶಸ್ತಿ2026’ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಮಹಾಸ್ವಾಮಿಗಳು, ಕುರುಬೂರು ಶಾಂತಕುಮಾರ್, ತಹಸೀಲ್ದಾರ್ ಸುರೇಶ್ ಆಚಾರ್, ಪೊಲೀಸ್ ವೃತ್ತ ನಿರೀಕ್ಷಕ ಧನಂಜಯ್ ಹಾಗೂ ಬೆಳಕು ಸೇವಾ ಫೌಂಡೇಶನ್‌ನ(ರಿ.) ಸ್ಥಾಪಕರು, ಅಧ್ಯಕ್ಷರು, ಪದಾಧಿಕಾರಿಗಳು, ಮಾಧ್ಯಮ ಮಿತ್ರರು ಹಾಗೂ ಆಯೋಜಕರು ಉಪಸ್ಥಿತರಿದ್ದರು.
ಪ್ರಶಸ್ತಿಗಳು ಮಾರಟವಾಗುತ್ತಿರುವಂತಹ ಸಮಯದಲ್ಲಿ ಪ್ರಾಮಾಣಿಕ ನಿಸ್ವಾರ್ಥ ಸಾಧಕರನ್ನು ಗುರುತಿಸಿ ಗೌರವಿಸುವ ಈ ಬೆಳಕು ಫೌಂಡೇಶನ್ (ರಿ.) ಸಂಸ್ಥೆಯ ಉದ್ದೇಶ ಬೇರೆ ಸಂಘ ಸಂಸ್ಥೆ ಗಳಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಮರ್ಪಣೆಯಿಂದ ಮುಂದುವರಿಯಲು ಪ್ರೇರಣೆ ನೀಡಿ ಗೌರವಿಸಿರುವ ಇವರ ಕಾರ್ಯ ಎಲ್ಲರಿಗೂ ಮಾದರಿ. ಇಂತಹ ಅರ್ಥಪೂರ್ಣ ವೇದಿಕೆಯನ್ನು ನಿರ್ಮಿಸಿ, ರಾಜ್ಯದ್ಯಂತ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಬೆಳಕು ಸೇವಾ ಫೌಂಡೇಶನ್ (ರಿ.) ಅವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಲೇಬೇಕು.
ವರದಿ : ಸುರೇಶ್ ಕುಮಾರ್ ಜಿ ಚಾರ್ವಾಕ

