ಏಕದಂತ ಫ್ರೆಂಡ್ಸ್ ನಿನ್ನಿಕಲ್ಲು–ಕೊಳಕೆ ನೂತನ ಪದಾಧಿಕಾರಿಗಳ ಆಯ್ಕೆ; ಸತೀಶ್ ಇರ್ವತ್ತೂರು ಅಧ್ಯಕ್ಷರಾಗಿ ನೇಮಕ

0
31

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇರ್ವತ್ತೂರು ಗ್ರಾಮದ ನಿನ್ನಿಕಲ್ಲು–ಕೊಳಕೆ ವ್ಯಾಪ್ತಿಯ “ಏಕದಂತ ಫ್ರೆಂಡ್ಸ್” ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಸಂಘಟನೆಯ ಗೌರವ ಅಧ್ಯಕ್ಷರಾಗಿ ವಸಂತ್ ದೇವಾಡಿಗ, ಅಧ್ಯಕ್ಷರಾಗಿ ಸತೀಶ್ ಇರ್ವತ್ತೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಹೊಸಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ:

  • ಗೌರವ ಅಧ್ಯಕ್ಷರು: ವಸಂತ್ ದೇವಾಡಿಗ
  • ಅಧ್ಯಕ್ಷರು: ಸತೀಶ್ ಇರ್ವತ್ತೂರು
  • ಉಪಾಧ್ಯಕ್ಷರು: ಸಚಿನ್ ಕುಮಾರ್, ಶಶಿಧರ್ ಕುಮಾರ್
  • ಪ್ರಧಾನ ಕಾರ್ಯದರ್ಶಿ: ವಿಜಯ್ ಕುಮಾರ್ ಹೊಸಬೆಟ್ಟು
  • ಜತೆ ಕಾರ್ಯದರ್ಶಿ: ರಾಕೇಶ್ ಕುಮಾರ್
  • ಕೋಶಾಧಿಕಾರಿ: ಸುಕೇಶ್ ಕುಮಾರ್
  • ಜತೆ ಕೋಶಾಧಿಕಾರಿ: ಸುಶಾಂತ್ ಕುಮಾರ್
  • ಕ್ರೀಡಾ ಕಾರ್ಯದರ್ಶಿಗಳು: ಗುರುಕಿರಣ್, ಕಾರ್ತಿಕ್ ಕುಮಾರ್
  • ಸಂಘಟನಾ ಕಾರ್ಯದರ್ಶಿ: ಗಣೇಶ್ ಕುಮಾರ್
  • ಸಾಂಸ್ಕೃತಿಕ ಕಾರ್ಯದರ್ಶಿ: ಧರಣೇಂದ್ರ ಕುಮಾರ್

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಸಂಘಟನೆಯು ಸಾಮಾಜಿಕ, ಧಾರ್ಮಿಕ ಹಾಗೂ ಯುವಜನ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ : ಸತೀಶ್ ಇರ್ವತ್ತೂರು