ಉಡುಪಿ : ಶ್ರೀಕೃಷ್ಣ ಮಠದ ಪರ್ಯಾಯ ಶೀರೂರು ಮಠದ ಪೂರ್ವ ಯತಿಗಳಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಅವರ 8ನೇ ಆರಾಧನಾ ಮಹೋತ್ಸವ ಭಕ್ತಿಭಾವದಿಂದ ಆಚರಿಸಲಾಯಿತು.
ಆರಾಧನಾ ಪ್ರಯುಕ್ತ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಅವರ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ವಿಶೇಷ ಮೆರವಣಿಗೆ ನಡೆಯಿತು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ದರ್ಶನ ಪಡೆದು ಆರಾಧನೆಯಲ್ಲಿ ಪಾಲ್ಗೊಂಡರು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಆರಾಧನಾ ಕಾರ್ಯಕ್ರಮದಲ್ಲಿ ಶ್ರೀಗಳ ಸ್ಮರಣಾರ್ಥ ವಿಶೇಷ ಪೂಜೆ ಹಾಗೂ ಧಾರ್ಮಿಕ ಆಚರಣೆಗಳು ನೆರವೇರಿದವು. ರಥಬೀದಿಯಲ್ಲಿ ನಡೆದ ಮೆರವಣಿಗೆಗೆ ಭಕ್ತರಿಂದ ಭಕ್ತಿಪೂರ್ವಕ ಸ್ಪಂದನೆ ವ್ಯಕ್ತವಾಯಿತು.

