ರಸ್ತೆ ಬದಿಯಲ್ಲಿ ಕಸ ಎಸೆತ ಟೆಂಪೋ ಮಾಲೀಕನಿಗೆ ಹೊಸಬೆಟ್ಟು ಪಂಚಾಯಿತಿಯಿಂದ ದಂಡ

0
27

ಮೂಡುಬಿದಿರೆ : ತಾಲೂಕಿನ ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ ಟೆಂಪೋ ವಾಹನದ ಮಾಲೀಕನಿಗೆ ಪಂಚಾಯಿತಿ ಅಧಿಕಾರಿಗಳು ₹5,000 ದಂಡ ವಿಧಿಸಿದ್ದಾರೆ.

ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸ್ಥಳ ಪರಿಶೀಲನೆ ನಡೆಸಿದ ವೇಳೆ ರಸ್ತೆ ಬದಿಯಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿರುವುದು ಪತ್ತೆಯಾಯಿತು. ತಕ್ಷಣವೇ KA 19 AA 8030 ಸಂಖ್ಯೆಯ ಟೆಂಪೋ ವಾಹನದ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ₹1,500 ದಂಡ ವಿಧಿಸಿದರು.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಸುರಿಯದೇ, ಪಂಚಾಯಿತಿಯಿಂದ ನಿಗದಿಪಡಿಸಿರುವ ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಪಂಚಾಯಿತಿ ಮನವಿ ಮಾಡಿದೆ. ಪರಿಸರ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಸಹಕರಿಸಬೇಕಿದ್ದು, ಇಂತಹ ಉಲ್ಲಂಘನೆಗಳು ಮುಂದುವರಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.