ಕಳೆದ ವರ್ಷ ಮಣಿನಾಲ್ಕೂ ರು ಸರ್ಕಾರಿ ಪಿಯು ಕಾಲೇಜ್ ಗೂ ನುಗ್ಗಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯೂ ಬಚಾವ್!

0
10

ಕಳೆದ ವರ್ಷ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಸರ್ಕಾರಿ ಪಿಯು ಕಾಲೇಜಿನ ಆವರಣದೊಳಗೆ ಬೆಳ್ಳಂ ಬೆಳಗ್ಗೆ ರೈನ್ ಕೋಟ್ ಧರಿಸಿ ನುಗ್ಗಿದ ಸ್ಥಳೀಯ ವ್ಯಕ್ತಿಯೋರ್ವ ಕಾಲೇಜಿನ ಜ ಗಲಿಯಲ್ಲಿ ಒಬ್ಬಂಟಿಯಾಗಿ ಕುಳಿತಿದ್ದದ್ದ ವಿದ್ಯಾರ್ಥಿನಿಯೊರ್ವಳನ್ನು ಕಾಲೇಜಿನ ಹಿಂಭಾಗಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿ ಪೊಲೀಸರ ಅತಿಥಿಯಾಗಿದ್ದರೂ ಸಹ ಕೆಲವೇ ದಿನಗಳಲ್ಲಿ ಆತ ನ್ಯಾಯಾಂಗ ಬಂಧನದಿಂದ ಬಚ್ಚಾವಾಗಿದ್ದ.

ಕುಗ್ರಾಮವಾಗಿರುವ ಮಣಿನಾಲ್ಕೂರು ಪ್ರದೇಶಕ್ಕೆ ಯಾವುದೇ ನಿರ್ದಿಷ್ಟವಾದ ಸಾರಿಗೆ ಸಂಪರ್ಕದ ವ್ಯವಸ್ಥೆ ಗಳಾಗಲಿ ವಾಹನ ಸಂಚಾರಗಳಾಗಲಿ ಇಲ್ಲದ ಕಾರಣದಿಂದಾಗಿ ಆ ವಿದ್ಯಾರ್ಥಿನಿ ಬೆಳಗ್ಗೆ 7:00ಗೆ ಮಾತ್ರ ಇರುವ ಏಕೈಕ ಖಾಸಗಿ ಬಸ್ಸಿನಲ್ಲಿ ಬಂದು ಕಾಲೇಜಿನ ಆವರಣದೊಳಗೆ ಇರುವುದು ವಾಡಿಕೆಯಾಗಿತ್ತು. ಆದರೆ ಬಸ್ ಸಂಚಾರ ಕಡಿಮೆಯಾದ ಕಾರಣ ಈ ಕಾಲೇಜಿಗೆ ಇತರ ವಿದ್ಯಾರ್ಥಿಗಳು ಬರುವುದೂ ತಡವಾಗಿಯೆ.

ಹೀಗಾಗಿ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕರು ಬರುವುದುಕೂಡಾ 9:30 ನಂತರವೇ ಎನ್ನಲಾಗುತ್ತಿದೆ. ಹೀಗಾಗಿ ಈ ಒಂದು ಸಮಯ ಸಂದರ್ಭವನ್ನ ಉಪಯೋಗಿಸಿಕೊಂಡ ಆ ವ್ಯಕ್ತಿ ಈ ವಿದ್ಯಾರ್ಥಿನಿ ಒಬ್ಬಂಟಿಯಾಗಿರುವುದನ್ನು ಗಮನಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ ಈ ವೇಳೆ ಆಕೆ ಜೋರಾಗಿ ಕಿರಿಚಿಕೊಂಡು ರಸ್ತೆಗೆ ಓಡಿ ಬಂದ ಕಾರಣದಿಂದಾಗಿ ಮತ್ತು ಅದೇ ಸಮಯಕ್ಕೆ ಕೆಲವೊಂದು ವಿದ್ಯಾರ್ಥಿಗಳು ಬೊಬ್ಬಿಡುತ್ತಿದ್ದ ವಿದ್ಯಾರ್ಥಿನಿಯ ಸಹಾಯಕ್ಕೆ ಬಂದ ಕಾರಣದಿಂದಾಗಿ ಆತ ತಪ್ಪಿಸಿಕೊಂಡಿದ್ದ ಬಳಿಕ ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿ ದ ಪ್ರಕಾರ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತಾದರೂ ಆತ ಕೆಲವೇ ಸಮಯಗಳಲ್ಲಿ ಬಚಾವಾಗಿ ಹೊರಬಂದಿದ್ದ. ಇದೇ ಪ್ರೀತಿ ಲಾವಣ್ಯ ಳ ಪಾತಕಿ ಹಂತಕನೂ ಸಹ ಕಾನೂನಿನ ಕುಣಿಕೆಯಿಂದ ಬಚಾವಾದರೆ ಏನು ಗತಿ? ಎಂಬ ಆತಂಕ ಇದೀಗ ಮಣಿ ನಾಲ್ಕೂರು,ಕಕ್ಕೆಪದವು ಸೇರಿದಂತೆ ಸುತ್ತಮುತ್ತಲಿನ ಜನರ ಆತಂಕವಾಗಿದೆ ಎನ್ನಲಾಗುತ್ತಿದೆ.

ವರದಿ : ಶಿವನಂದ