ಬಂಟ್ವಾಳ ತಾಲೂಕು ಕೇಂದ್ರವಾಗಿರುವ ಬಿಸಿ ರೋಡ್ ಗೆ ಹಲವು ವರ್ಷಗಳಿಂದ ವಾಸ್ತು ದೋಷ ಬಾಧಿಸುತ್ತಿದೆ ಎನ್ನುವ ವಿಡಂಬನಾತ್ಮಕ ಮಾತುಗಳು ಈಗ ನಿಜವಾಗ ತೊಡಗಿದ. ಅದು ಬಿಸಿ ರೋಡನ್ನು ಪ್ರವೇಶಿಸುವ ಅವೈಜ್ಞಾನಿಕ ವೃತ್ತದಿಂದ ಹಿಡಿದು ಏಕಮುಖ ಸಂಚಾರಕಷ್ಟೇ ನಿರ್ಮಿಸಲಾಗಿರುವ ಓವರ್ ಬ್ರಿಡ್ಜ್ ಸೇರಿದಂತೆ ಹಲವು ಊರುಗಳ ಸಂಪರ್ಕ ಕೇಂದ್ರವೇನಿಸಿಕೊಂಡಿರುವ ಬಿಸಿ ರೋಡ್ ನ ಖಾಸಗಿ ಬಸ್ ನಿಲ್ದಾಣ ಅಥವಾ ಸರ್ಕಾರಿ ಬಸ್ ನಿಲ್ದಾಣದ ವರೆಗೆ ಇಲ್ಲಿ ಎಲ್ಲವೂ ಅಸ್ತವ್ಯಸ್ತ ಮತ್ತು ಅವ್ಯವಸ್ಥೆಯಿಂದ ಕೂಡಿರುವುದೇ ಬಿ ಸಿ ರೋಡ್ ವಾಸ್ತುದೋಷವನ್ನು ಎತ್ತಿ ತೋರಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಯೊಂದರಲ್ಲಿ ಏಕಮುಖ ಸಂಚಾರಕ್ಕಷ್ಟೇ ಓವರ್ ಬ್ರಿಡ್ಜ್ ನಿರ್ಮಿಸುವ ಮೂಲಕ ಸಂಬಂಧಪಟ್ಟ ಇಲಾಖೆ, ಇಂಜಿನಿಯರ್ ಗಳು, ಹಾಗೂ ಸಂಬಂಧಪಟ್ಟ ರಾಜಕಾರಣಿಗಳು ತಮ್ಮ ಮೂರ್ಖತನವನ್ನು ಬಿಸಿ ರೋಡ್ ನಲ್ಲಿ ಪ್ರದರ್ಶಿಸಿದ್ದಾರೆ. ಹೀಗಾಗಿಯೇ ಪುತ್ತೂರು ಬೆಂಗಳೂರು ಧರ್ಮಸ್ಥಳ ಕಡೆಯಿಂದ ಸಂಚರಿಸುವ ವಾಹನಗಳು ಬಿಸಿ ರೋಡ್ ವೃತ್ತದ ಬಳಿ ನಿರ್ಮಾಣವಾಗಿರುವ ವನ್ ವೇ ಓವರ್ ಬ್ರಿಜ್ ಮೂಲಕವೇ ಹಾದು ಹೋಗಬೇಕಾಗುತ್ತದೆ.
ಆದರೆ ಮಂಗಳೂರಿನಿಂದ ಧರ್ಮಸ್ಥಳ,ಉಪ್ಪಿನಂಗಡಿ, ಪುತ್ತೂರು,ಬೆಂಗಳೂರು, ಮಡಿಕೇರಿ ಕಡೆಗೆ ತೆರಳುವ ವಾಹನಗಳಿಗೆ ಮಾತ್ರ ಈ ಓವರ್ ಬ್ರಿಡ್ಜ್ ನಲ್ಲಿ ಸಂಚರಿಸಲು ಅವಕಾಶ ಇಲ್ಲದ ಕಾರಣ ಆ ಎಲ್ಲಾ ವಾಹನಗಳು ಓವರ್ ಬ್ರಿಡ್ಜ್ ನ ಕೆಳಗಿನ ಬಿಸಿ ರೋಡ್ನ ಖಾಸಗಿ ಬಸ್ದಿಲ್ದಾಣ ಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿಯೆ ಸಂಚರಿಸಬೇಕಾಗುತ್ತದೆ.
ಈ ರೀತಿಯ ಅವೈಜ್ಞಾನಿಕ ಅವ್ಯವಸ್ಥೆಯ ಕಾರಣದಿಂದಾಗಿಯೇ ಬಿಸಿ ರೋಡ್ ನ ಸರ್ಕಾರಿ ಬಸ್ ನಿಲ್ದಾಣವನ್ನು ಜನ ಸಂಚಾರವೂ ಇಲ್ಲದ ಹಾಗೂ ಪ್ರಯಾಣಿಕರು ಹೋಗಲ್ಲದ ನಿರ್ಜನ ಸ್ಥಳದಲ್ಲಿ ನಿರ್ಮಿಸಿ ನಿರ್ಮಿಸುವ ಮೂಲಕ ಕೆಎಸ್ಆರ್ಟಿಸಿ ತನ್ನ ಮೂರ್ಖತನವನ್ನೂ ಪ್ರದರ್ಶಿಸಿದೆ. ಹೀಗಾಗಿ ಈಜನ ಸರ್ಕಾರಿ ಬಸ್ ನಿಲ್ದಾಣದೊಳಗೆ ಮಂಗಳೂರು ಕಡೆಗೆ ತೆರಳುವ ಸರ್ಕಾರಿ ಬಸ್ಸುಗಳಷ್ಟೇ ಟಿಸಿ ಕೌಂಟರ್ನಲ್ಲಿ ಎಂಟರ್ ಮಾಡಿಕೊಳ್ಳಲಷ್ಟೇ ಪ್ರವೇಶಿಸುತ್ತಿರುವುದರಿಂದ ಈ ಬಸ್ ನಿಲ್ದಾಣ ನಿರ್ಜನ ನಿಲ್ದಾಣವಾಗಿದೆ.
ಅದರಲ್ಲೂ ಮುಖ್ಯವಾಗಿ ಈ ಬಸ್ ನಿಲ್ದಾಣದ ಕಚೇರಿ ಒಳಗೆ ಕೇವಲ ಒಬ್ಬರೇ ಟಿ ಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಧರ್ಮಸ್ಥಳ ಬೆಂಗಳೂರು ಪುತ್ತೂರು ಮಡಿಕೇರಿ ಕಡೆಗಳಿಗೆ ಸಂಚರಿಸುವ ಸರ್ಕಾರಿ ಬಸ್ಸುಗಳು ಈ ನಿರ್ಜನ ಬಸ್ ನಿಲ್ದಾಣದೊಳಗೆ ಪ್ರವೇಶಿಸಿ ಟಿಸಿ ಎಂಟ್ರಿ ಮಾಡಿಕೊಳ್ಳುವ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಇಲಾಖೆ ಈವರೆಗೂ ಮಾಡಿಲ್ಲ. ಇದು ಕೂಡ ಈ ನಿರ್ಜನ ಬಸ್ ನಿಲ್ದಾಣದ ನಿರ್ಜೀವ ತನಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಈ ನಿರ್ಜೀವ ಬಸ್ ನಿಲ್ದಾಣವೇ ಮೊನ್ನೆ ಅಮಾಯಕ ಲಾವಣ್ಯಳ ಸಜೀವ ಬರ್ಬರ ಹತ್ಯೆಗೂ ಸಾಕ್ಷಿಯಂತಾಗಿದೆ.
ವರದಿ : ಶಿವನಂದ

