ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ – 2026 : ಗಡಿರೇಖೆ ಮೀರಿ ಬೆಳೆದ ಭಾವನಾತ್ಮಕ ಬಂಧ

0
9

ಕಾಸರಗೋಡಿನಲ್ಲಿ ಜುಲೈ 26 ಮತ್ತು 27 ರಂದು ಅಕ್ಷರ ಜಾತ್ರೆ,ಸಾಧಕರಿಗೆ ಸದ್ಭಾವನಾ ಪ್ರಶಸ್ತಿ, ಶೈಕ್ಷಣಿಕ ಗೌರವ ಹಾಗೂ ವೈಭವದ ಸಾಂಸ್ಕೃತಿಕ ಕಲಾಮೇಳಕ್ಕೆ ಸಿದ್ಧತೆ

​ಕಾಸರಗೋಡು : ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ, ಭಾಷಿಕ ಬಾಂಧವ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗೃತವಾಗಿರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

ಭಾಷಾ ಪ್ರೇಮಕ್ಕೆ ಯಾವುದೇ ಭೌಗೋಳಿಕ ಗಡಿಗಳ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತಾ, ಕಾಸರಗೋಡಿನ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ‘ಕನ್ನಡ ಭವನ’ದ ರಜತ ಸಂಭ್ರಮದ ಸಾಂಸ್ಕೃತಿಕ ಮೈಲಿಗಲ್ಲಾಗಿ ಈ ಬೃಹತ್ ಸಮ್ಮೇಳನ ಮೂಡಿಬರುತ್ತಿದೆ.

ನಾಡು-ನುಡಿಯ ಸೇವೆಗೆ ಸಮರ್ಪಿಸಿಕೊಂಡ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜರುಗಲಿರುವ ಈ ಕಾರ್ಯಕ್ರಮವು ಗಡಿನಾಡ ಕನ್ನಡಿಗರ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಜಾಗೃತಿಯ ದ್ಯೋತಕವಾಗಿದೆ.

​ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ (ಕಾಸರಗೋಡು) ಹಾಗೂ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು. ಸಹಾಭಾಗೀತ್ವದಲ್ಲಿ
​ದಿನಾಂಕ 26 ಜುಲೈ 2026 (ಬೆಳಿಗ್ಗೆ 9:00 ರಿಂದ ರಾತ್ರಿ 9:00) ಮತ್ತು 27 ಜುಲೈ 2026 (ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00). ದಿ. ಡಾ| ಲಲಿತಾ ಎಸ್.ಎನ್. ಭಟ್ ವೇದಿಕೆ, ಕನ್ನಡ ಭವನ, ಪಿ.ಎನ್.ಎಸ್. ರಸ್ತೆ, ನುಳ್ಳಿಪ್ಪಾಡಿ, ಕಾಸರಗೋಡು ಇಲ್ಲಿ ಅನಾವರಣಗೊಳ್ಳಲಿದೆ.

​ ರಾಮನಾಥ ಸಾಂಸ್ಕೃತಿಕ ಭವನದಿಂದ ಆರಂಭಗೊಳ್ಳುವ ವರ್ಣರಂಜಿತ ಕನ್ನಡ ಮೆರವಣಿಗೆ, ನಾಡಿನ ವಿವಿಧ ಜಾನಪದ ಕಲಾತಂಡಗಳಿಂದ ಹೊರಾಂಗಣ ಕಲಾ ಪ್ರದರ್ಶನಗಳು ಹಾಗೂ ವೈಭವೋಪೇತ ಸಾಂಸ್ಕೃತಿಕ ಮೇಳ , ಸಾಧಕರಿಗೆ ಗೌರವ ಹಾಗೂ ಶೈಕ್ಷಣಿಕ ಪುರಸ್ಕಾರ ವೈಭವ, ಸಮ್ಮೇಳನದ ಭಾಗವಾಗಿ ಸಾಹಿತ್ಯ, ಸಮಾಜಸೇವೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಸಾಧಕರಿಗಾಗಿ ಪ್ರಮುಖ ಪುರಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ.

​ರಾಜಶ್ರೀ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಗೋವಿಂದ ಪೈ ಹಾಗೂ ನಾಡೋಜ ಡಾ| ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗಳು.

ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್ ಹಾಗೂ ಸಮಾಜ ಸೇವಾ ರತ್ನ. ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ “Light of Hopes” ಶೈಕ್ಷಣಿಕ ಪ್ರಶಸ್ತಿ ಮತ್ತು ಸಮಾಜಮುಖಿ ಶಿಕ್ಷಕರಿಗೆ “ಶೈಕ್ಷಣಿಕ ರತ್ನ” ಪುರಸ್ಕಾರ. ಗಡಿನಾಡಿನ ಕನ್ನಡ ಸೇವೆ ಮತ್ತು ಸಾಂಸ್ಕೃತಿಕ ಸಹಕಾರವನ್ನು ಗುರುತಿಸಿ ವಿಶೇಷ ಸನ್ಮಾನ ನಡೆಯಲಿದ್ದು

“ಗಡಿಯ ರೇಖೆಗಳು ಭೂಪ್ರದೇಶಗಳನ್ನು ವಿಂಗಡಿಸಬಲ್ಲವೇ ಹೊರತು ಭಾಷೆ ಮತ್ತು ಸಂಸ್ಕೃತಿಯ ಭಾವನಾತ್ಮಕ ಬಂಧನವನ್ನಲ್ಲ. ಈ ಸಮ್ಮೇಳನವು ಕೇವಲ ಆಚರಣೆಯಾಗದೆ, ಮುಂದಿನ ತಲೆಮಾರಿಗೆ ನಮ್ಮ ನಾಡು-ನುಡಿಯ ಹಿರಿಮೆಯನ್ನು ತಲುಪಿಸುವ ಬದ್ಧತೆಯ ಸಂಕೇತವಾಗಿದೆ.”

ವರದಿ -ಮಂದಾರ ರಾಜೇಶ್