ಗ್ಲ್ಯಾಸ್ಗೋ ಕಾಮನ್​ವೆಲ್ತ್​ ಕ್ರೀಡಾಕೂಟ : ಭಾರತ ತಂಡಕ್ಕೆ ಉಡುಪಿಯ ರೋಹನ್​ ಫಿಸಿಯೋ ರಿಕವರಿ ಥೆರಪಿಸ್ಟ್​

0
82

ಉಡುಪಿ: ಸ್ಕಾಟ್​ಲ್ಯಾಂಡ್​ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಗ್ಲ್ಯಾಸ್ಗೋ 2026 ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತೀಯ ತಂಡದ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್​ ಆಗಿ ಉಡುಪಿ ಮೂಲದ ರೋಹನ್​ ಆರ್​. ಬಾರಿತ್ತಾಯ ನಿಯೋಜನೆಗೊಂಡಿದ್ದಾರೆ.

ಜುಲೈ 23 ರಿಂದ ಆಗಸ್ಟ್​ 2 ರವರೆಗೆ ನಡೆಯಲಿರುವ ಜಾಗತಿಕ ಕ್ರೀಡಾಕೂಟದಲ್ಲಿ ವಿಶ್ವದ ಪ್ರಮುಖ ಕಾಮನ್​ವೆಲ್ತ್​ ದೇಶಗಳ ಸಾವಿರಾರು ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ. ದೇಶದ ಕ್ರೀಡಾಪಟುಗಳ ಫಿಟ್​ನೆಸ್​ ಹಾಗೂ ಕ್ರೀಡಾ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿ ರೋಹನ್​ ಅವರ ಮೇಲಿದೆ. ಶ್ರಮಕ್ಕೆ ಸಿಕ್ಕ ಅಂತಾರಾಷ್ಟ್ರೀಯ ಗೌರವ ರೋಹನ್​ ಅವರು ಯುಕೆ ಪ್ರತಿಷ್ಠಿತ ಲಾಫ್​ಬರೋ ಯೂನಿವರ್ಸಿಟಿಯಿಂದ ಎಂಎಸ್​ಸಿ ಉನ್ನತ ವ್ಯಾಸಂಗ ಪೂರೈಸಿದ್ದಾರೆ.

ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ಐಕ್ಯಂ ಸ್ಪೋರ್ಟ್ಸ್​ ಸೈನ್ಸ್​ ಸಂಸ್ಥೆಯನ್ನು ಸ್ಥಾಪಿಸಿ, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ವೈಜ್ಞಾನಿಕ ಹಂತದ ಫಿಸಿಯೋ ಮತ್ತು ರಿಕವರಿ ಥೆರಪಿ ಸೇವೆಗಳನ್ನು ನೀಡುತ್ತಿದ್ದಾರೆ. ಅವರ ವೃತ್ತಿಪರ ಅನುಭವ ಪರಿಗಣಿಸಿ ಇಂಡಿಯನ್​ ಪ್ಯಾರಾ ಒಲಂಪಿಕ್​ ತಂಡದ ಚೀಫ್​ ಕೋಚ್​ ಸತ್ಯನಾರಾಯಣ್​ ಅವರು ಭಾರತ ತಂಡದ ಜೊತೆ ಸೇವೆ ಸಲ್ಲಿಸುವ ಈ ಮಹತ್ವದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.